ಕಲಘಟಗಿ: ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಭಕ್ತರೊಬ್ಬರು ಸುಕ್ಷೆತ್ರ ಉಳವಿಗೆ ಹರಕೆ ಹೊತ್ತು ದೀಡ ನಮಸ್ಕಾರ ಹಾಕುತ್ತಾ ಸಾಗುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಗ್ರಾಮದ ಶಂಕ್ರಪ್ಪ ಹತ್ತರಕಿ ಎಂಬುವರೇ ಗ್ರಾಮದಿಂದ ಉಳವಿ ಶ್ರೀ ಚೆನ್ನಬಸವಣ್ಣನವರ ಸನ್ನಿಧಿಗೆ ತೆರಳುಲು ದೀಡ ನಮಸ್ಕಾರ ಹಾಕುತ್ತಾ ಸಾಗಿ ಭಕ್ತಿ ಸಮರ್ಪಿಸಲಿದ್ದಾರೆ.
ಇವರು 2009 ರಲ್ಲಿ ಮೊದಲ ಬಾರಿಗೆ ದೀಡ ನಮಸ್ಕಾರ ಹಾಕಿದ್ದರು,ಅವರ ಇಷ್ಟಾರ್ಥಗಳು ಈಡೇರಿದ್ದರಿಂದ ಮತ್ತೆ ಜ್ಞಾನನಿಧಿ ಶ್ರೀಚನ್ನಬಸವಣ್ಣನವರ ಸುಕ್ಷೇತ್ರ ಉಳವಿಗೆ ಎರಡನೇ ಬಾರಿಗೆ "ಶಿವಾಯ ನಮಃ ಓಂ" ಎಂಬ ಮಂತ್ರ ಪಠಣ ಮಾಡುತ್ತಾ ತೆರಳುತ್ತಿದ್ದಾರೆ.
ಶನಿವಾರದಿಂದ ದೀಡ ನಮಸ್ಕಾರ ಹಾಕುತ್ತಿದ್ದು,ಗ್ರಾಮದ ಕೆಲ ಭಕ್ತರು ಇವರ ಸಹಾಯಕ್ಕೆ ಇದ್ದು,ಉಳವಿ ಕ್ಷೇತ್ರಕ್ಕೆ ತಲುಪಲು 15 ದಿನ ಬೇಕಾಗುತ್ತದೆ.
Kshetra Samachara
07/02/2021 08:06 pm