ಕಲಘಟಗಿ:ತಾಲೂಕಿನ ಸುಕ್ಷೇತ್ರ ಭೋಗೆನಾಗರಕೊಪ್ಪ ಗ್ರಾಮದ ಶ್ರೀ ಬಸವಣ್ಣದೇವರ ಜಾತ್ರಾ ರಥೋತ್ಸವ ಮಂಗಲವಾಧ್ಯಗಳೊಂದಿಗೆ ಗುರುವಾರ ಸಂಜೆ ಸಂಪನ್ನಗೊಂಡಿತು.
ಪ್ರಾತಃಕಾಲ ಶ್ರೀ ನಂದೀಶ್ವರನಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.ಸಂಜೆ ಪಲ್ಲಕ್ಕಿ ಉತ್ಸವ ನಂತರ ರಥೋತ್ಸವ ಮಂಗಲವಾದ್ಯಗಳೊಂದಿಗೆ ನೆರವೇರಿಸಲಾಯಿತು.ಸುತ್ತಲಿನ ಗ್ರಾಮಗಳ ಭಕ್ತರು ಭಕ್ತಿ ಸಮರ್ಪಿಸಿದರು.ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕೋವಿಡ್-19 ಮಹಾಮಾರಿ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಹಾಗೂ ಸಾಂಪ್ರಾದಾಯಿಕವಾಗಿ ಜಾತ್ರಾ ವಿಧಿ-ವಿಧಾನಗಳನ್ನು ನಡೆಸಲಾಯಿತು.
Kshetra Samachara
29/01/2021 12:12 pm