ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಹನ ಗುರುಸ್ವಾಮಿ ಸಂಗೀತ ಸುಧೆಯೊಂದಿಗೆ ಅಯ್ಯಪ್ಪನ ಆರಾಧನೆ

ಹುಬ್ಬಳ್ಳಿ: ಯುವ ಸಮುದಾಯದಲ್ಲಿ ಬೇರು ಬಿಟ್ಟಿರುವ ದುಶ್ಚಟಗಳನ್ನು ದೂರ ಮಾಡಿ ಆಧ್ಯಾತ್ಮಿಕ ಸಾಕಾರವನ್ನು ನೀಡುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿರುವ ದೇವಾಲಯವೊಂದು ಹುಬ್ಬಳ್ಳಿಯಲ್ಲಿದೆ. ಅದುವೇ ವಾಣಿಜ್ಯನಗರಿ ಹುಬ್ಬಳ್ಳಿಯ ಶಬರಿನಗರದ ಅಯ್ಯಪ್ಪ ಸ್ವಾಮಿ ದೇಗುಲ. ಹಾಗಿದ್ದರೇ ಈ ದೇವಾಲಯ ಏನೆಲ್ಲಾ ವಿಶಿಷ್ಟತೆಯನ್ನು ಹೊಂದಿದೆ ಎಂಬುವುದನ್ನು ನೋಡಿಕೊಂಡು ಬರೋಣ ಬನ್ನಿ.....

ಸುತ್ತಲೂ ನಿಶಬ್ದ ವಾತಾವರಣ.. ಹಸಿರು ತೋರಣಗಳ ಆಹ್ವಾನ...ಮನಸ್ಸಿಗೆ ಮುದ ನೀಡುವ ಪರಿಸರ. ಇದೆಲ್ಲದರ ನಡುವೆ ತಲೆ ಎತ್ತಿ ನಿಂತಿರುವ ಅಯ್ಯಪ್ಪ ಸ್ವಾಮಿಯ ದೇಗುಲ. ವಾಣಿಜ್ಯನಗರಿಯ ಜನತೆಗೆ ಮಾತ್ರವಲ್ಲದೇ ಉತ್ತರ ಕರ್ನಾಟಕದ ಜನತೆಗೆ ಹಾಗೂ ಅಯ್ಯಪ್ಪನ ಭಕ್ತರಿಗೆ ಇದು ಶಬರಿಮಲೈ ಆಗಿದೆ. ಸುಮಾರು 29 ವರ್ಷಗಳ ಇತಿಹಾಸ ಹೊಂದಿರುವ ಶಬರಿನಗರದ ಅಯ್ಯಪ್ಪ ಸ್ವಾಮಿ ದೇಗುಲವನ್ನು ಅಯ್ಯಪ್ಪ ಸ್ವಾಮಿಯ ಭಕ್ತರಾದ ಮೋಹನ ಗುರುಸ್ವಾಮಿಯವರು ಸ್ಥಾಪನೆ ಮಾಡಿರುವುದು ವಿಶೇಷವಾಗಿದೆ.

ಹೌದು..ಸುಮಾರು 35 ವರ್ಷಗಳ ಕಾಲ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದು,ತಮ್ಮ ಹದಿನೇಳನೇ ವಯಸ್ಸಿನಲ್ಲಿಯೇ ದೇವಾಲಯ ನಿರ್ಮಾಣದ ಕನಸನ್ನು ಕಂಡಿದ್ದರು.ಅದರಂತೆ ಶಬರಿನಗರದಲ್ಲಿ ಭವ್ಯವಾದ ದೇವಾಲಯ ನಿರ್ಮಾಣ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ. ಈಗಾಗಲೇ ಮೋಹನ ಗುರುಸ್ವಾಮಿಯವರು 18 ಅಯ್ಯಪ್ಪ ಸ್ವಾಮಿಯ ಪೀಠವನ್ನು ಸ್ಥಾಪನೆ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗೂ ಅಯ್ಯಪ್ಪ ಸ್ವಾಮಿಯ ಕೀರ್ತಿಯನ್ನು ಬೆಳಗಿಸಲು ಇವರು ಕೂಡ ಕಾರಣಿಕರ್ತರು.ಅಲ್ಲದೇ ಈಗಾಗಲೇ ಅಯ್ಯಪ್ಪ ಸ್ವಾಮಿಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಿಯ ಕುರಿತು ಭಕ್ತಿ ಗೀತೆಗಳನ್ನು ಹಾಡಿರುವ ಅವರು ಈಗಾಗಲೇ 22 ಆಡಿಯೋ ಸಿಡಿಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಎಲ್ಲ ರೀತಿಯ ಸೈಟ್ ಗಳಲ್ಲಿ ಕೂಡ ಮೋಹನ ಗುರುಸ್ವಾಮಿಯವರ ಹಾಡನ್ನು ಕೇಳಬಹುದಾಗಿದೆ.

ಇನ್ನೂ ನಾಡಿನಾದ್ಯಂತ ತಮ್ಮದೇ ರೀತಿಯಲ್ಲಿ ಅಯ್ಯಪ್ಪ ಸ್ವಾಮಿಯ ಆರಾಧನೆಯಿಂದ ಹೆಸರು ಮಾಡಿರುವ ಮೋಹನ ಗುರುಸ್ವಾಮಿಯವರು ಎಂದಿಗೂ ಪ್ರಚಾರ ಭಯಸಿದವರಲ್ಲ ಆದರೂ ಕೂಡ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಮಾತ್ರ ಅವರನ್ನು ಬೆನ್ನುಗಟ್ಟಿ ಬಂದಿರುವುದಂತೂ ಸತ್ಯ...ಒಟ್ಟಿನಲ್ಲಿ ಶಬರಿನಗರವನ್ನು ಕರ್ನಾಟಕದ ಶಬರಿಮಲೈ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಂತೂ ಖಂಡಿತ...

Edited By : Nagaraj Tulugeri
Kshetra Samachara

Kshetra Samachara

01/01/2021 12:07 am

Cinque Terre

42.13 K

Cinque Terre

2

ಸಂಬಂಧಿತ ಸುದ್ದಿ