ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಗೌರಿ ಹುಣ್ಣಿಮೆಯ ದಿನವೇ ನಡೆಯಲಿದೆ ಹಿರೇ ಮಾರುತಿ ರಥೋತ್ಸವ ಸಂಭ್ರಮ

ಅಣ್ಣಿಗೇರಿ : ಪಟ್ಟಣದ 12 ಮಾರುತಿ ದೇವಸ್ಥಾನಗಳಲ್ಲಿ ಪೂರ್ವಕ್ಕೆ ಮುಖ ಮಾಡಿ ನಿಂತಿರುವ ಅತಿ ಎತ್ತರದ ಏಕೈಕ ಕುರಬಗೇರಿಯ ಹಿರೇ ಮಾರುತಿ ರಥೋತ್ಸವ ಪ್ರತಿ ವರ್ಷವೂ ಗೌರಿ ಹುಣ್ಣಿಮೆಯ ದಿನವೇ ನೆರವೇರಲ್ಪಡುತ್ತದೆ.

ಇಂದು ಗೌರಿ ಹುಣ್ಣಿಮೆಯ ಪ್ರಯುಕ್ತ ಬೆಳಂ ಬೆಳಿಗ್ಗೆಯ ಆಂಜನೇಯನಿಗೆ ಪೂಜಾಭಿಷೇಕ ನೆರವೇರಿದ್ದು, ಅಣ್ಣಿಗೇರಿ ಪಟ್ಟಣದ ಮಹಿಳೆಯರು, ಮಕ್ಕಳು ಸಾರ್ವಜನಿಕರು ಆಗಮಿಸಿ ಆಂಜನೇಯನ ದರ್ಶನ ಪಡೆಯುತ್ತಿದ್ದಾರೆ. ಇಂದು ಸಾಯಂಕಾಲದ ವೇಳೆ ರಥೋತ್ಸವ ಜರುಗಲಿದ್ದು, ಪ್ರತಿ ವರ್ಷದ ವಾಡಿಕೆ ಸಂಪ್ರದಾಯದಂತೆ ಇಂದು ಬೆಳಿಗ್ಗೆ ಬ್ರಾಹ್ಮಣರು ರಥವನ್ನು ಹಿರಿಯರ ಸಮ್ಮುಖದಲ್ಲಿ ಎಳೆದು ದೇವಸ್ಥಾನದ ಮುಂದೆ ತಂದಿದ್ದು, ಸಂಜೆ ಗ್ರಾಮಸ್ಥರು ರಥ ಎಳೆದು ಜಾತ್ರೆ ಯಶಸ್ವಿಗೊಳಿಸಲಿದ್ದಾರೆ.

ದೇವಸ್ಥಾನದ ಅಭಿವೃದ್ಧಿ ಕಾರ್ಯ ಆರಂಭವಾಗಿರುವ ಕಾರಣ ಆಂಜನೇಯನ ಜಾತ್ರಾ ಉತ್ಸವ ಈ ವರ್ಷ ಸರಳವಾಗಿ ನೆರವೇರುತ್ತಿದ್ದು, ಪ್ರತಿ ವರ್ಷ ನಡೆಯುತ್ತಿದ್ದ ಕಬಡ್ಡಿ, ಕುಸ್ತಿ ಪಂದ್ಯಾವಳಿ ಆಯೋಜಿಸಿಲ್ಲ. ಈಗಾಗಲೇ ದೇವಸ್ಥಾನಕ್ಕೆ ಭಕ್ತಾಧಿಗಳು ಆಗಮಿಸಿ ಹರಕೆ ಬೇಡಿಕೆಗಳನ್ನು ದೇವರಲ್ಲಿ ಸಮರ್ಪಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

30/11/2020 04:22 pm

Cinque Terre

25.98 K

Cinque Terre

0

ಸಂಬಂಧಿತ ಸುದ್ದಿ