ನವಲಗುಂದ : ಗ್ರಾಮೀಣ ಭಾಗದಲ್ಲಿ ಹಬ್ಬ ಹರಿದಿನಗಳನ್ನು ನಗರ ಪ್ರದೇಶಗಳಿಗಿಂತ ಅದ್ದೂರಿಯಾಗಿ ಆಚರಣೆ ಮಾಡ್ತಾರೆ. ಹಾಗೇ ಪಟ್ಟಣವಾದ್ರೂ ನವಲಗುಂದದಲ್ಲಿ ಹಬ್ಬದ ಸಂಭ್ರಮಕ್ಕೇನೂ ಕಮ್ಮಿ ಇಲ್ಲಾ, ಪ್ರತಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವು ರಾರಾಜಿಸುತ್ತಿದ್ರೆ, ಕೋಟೆ ಕಟ್ಟಿ ಹಟ್ಟೆವ್ವಳ್ಳನ ಕೂರಿಸಲಾಗಿತ್ತು.
ಜಾನುವಾರು ಕಟ್ಟುವ ಹಟ್ಟಿಯಲ್ಲಿನ ಸಗಣಿಯನ್ನ ಎತ್ತಿಟ್ಟು , ಕೋಟೆ ಕಟ್ಟಿ ಕೋಟೆಗೆ ಬಾಗಿಲು ಬರೆದು, ಅಲ್ಲಿಯೇ ಪಾಂಡವರು - ಕೌರವರ ಸೈನ್ಯವನ್ನು ಸಗಣಿಯಿಂದ ನಿರ್ಮಿಸಿ, ಮನೆಯ ಎಲ್ಲಾ ಬಾಗಿಲುಗಳ ಮುಂದೆ ಪಂಚ ಪಾಂಡವರಂತೆ ಐದು ಹಟ್ಟೆವ್ವಳನ್ನು ಕೂರಿಸಿ, ಅವಳ ತಲೆಯ ಮೇಲೆ ಹೂವು, ಮಾಣಿಕಡ್ಡಿ , ಉತ್ತರಾಣಿ ಕಡ್ಡಿಗಳನ್ನು ಸಿಲುಕಿಸಿ ಇಡಲಾಗಿತ್ತು. ಇದು ದೀಪಾವಳಿಯ ವಿಶೇಷವೇ ಎನ್ನಬಹುದು...
Kshetra Samachara
16/11/2020 11:38 am