ನವಲಗುಂದ : ಉತ್ತರ ಕರ್ನಾಟಕದ ಹಿಂದು - ಮುಸ್ಲಿಮರ ಭಾವೈಕ್ಯತೆಗೆ ಹೆಸರುವಾಸಿಯಾದ , ಐತಿಹಾಸಿಕ ಹಿನ್ನೆಲೆ ಹೊಂದಿರುವ ಯಮನೂರ ಚಾಂಗದೇವನ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಜರುಗಿತು.
ಗುರುವಾರವಾದ ಇಂದು ಯಮನೂರ ಚಾಂಗದೇವನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು, ಅಷ್ಟೇ ಅಲ್ಲದೆ ದರ್ಶನಕ್ಕೆ ಬಂದ ಭಕ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಕೆಲವರು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವುದರಲ್ಲಿ ನಿರತರಾದರೆ. ಉಳಿದವರು ಅಲ್ಲೇ ಅಡುಗೆ ಮಾಡಿ, ಊಟ ಮಾಡಿದರು. ಇನ್ನೂ ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗಲಿದೆ ಎಂಬ ಪ್ರತೀತಿ ಇದ್ದು, ಜಾತ್ರೆಗೆ ಬಂದ ಭಕ್ತರು ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿ ಚಾಂಗದೇವನ ದರ್ಶನ ಪಡೆದರು.
Kshetra Samachara
12/11/2020 07:52 pm