ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಐತಿಹಾಸಿಕ ತೆಪ್ಪದ ರಥೋತ್ಸವ ಎಲ್ಲೇಡೆ ಭಕ್ತಿ ಭಾವ ಸಂಭ್ರಮ

ಅಬ್ಬಾ... ಅಲ್ಲೇಲ್ಲಾ ಜನಸಾಗರ, ಆ ಜನರ ಮಧ್ಯೆ ಭಕ್ತಿ ಭಾವದ ಕಳೆ, ಆ ಕಳೆಗೆ ಇಂಬು ನೀಡಿದ್ದೇ ಪಂಚಗ್ರಹ ಹಿರೇಮಠದ ತೆಪ್ಪದ ರಥೋತ್ಸವ.

ಹೌದು ! ಕಳೆದ ನಾಲ್ಕೈದು ವರ್ಷಗಳಿಂದ ಕೆರೆಯಂಗಳ ಹಾಗೂ ಅಗಸಿಹೊಂಡ ಸಂಪೂರ್ಣ ಭರ್ತಿಯಾಗದೇ ಸಂಪನ್ನವಾಗಿದ್ದ ಕುಂದಗೋಳ ಪಟ್ಟಣದ ಐತಿಹಾಸಿಕ ತೆಪ್ಪದ ರಥೋತ್ಸವ ಅತಿ ಸಂಭ್ರಮ ಸಡಗರದಿಂದ ಸೋಮವಾರ ನೆರವೇರಿದೆ. ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವೇಶ್ವರ ಸ್ವಾಮಿಗಳು, ಕಲ್ಯಾಣಪುರ ಬಸವಣ್ಣಜ್ಜನವರ ದಿವ್ಯ ಸಾನ್ನಿಧ್ಯದಲ್ಲಿ ಮುತ್ತೈದೆಯರಿಂದ ಕೆರೆಗೆ ಬಾಗಿನ ಅರ್ಪಿಸಿ ಸಾಯಂಕಾಲ ಸಂಪೂರ್ಣ ಕುಂದಗೋಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರ ಸಮ್ಮುಖದಲ್ಲಿ ಅತಿ ಅದ್ಧೂರಿಯಾಗಿ ತೆಪ್ಪದ ರಥೋತ್ಸವ ನೆರವೇರಿತು.

ವಿವಿಧ ಭಕ್ತಿ ಭಜನಾ ಸೇವೆಯಲ್ಲಿ ನಡೆದ ತೆಪ್ಪದ ರಥೋತ್ಸವದಲ್ಲಿ ಯುವಕರು ಮಹಿಳೆಯರು ನಾಗರೀಕರು ಭಾಗಿಯಾಗಿ ಅತಿ ಸಂಭ್ರಮದಿಂದ ತೆಪ್ಪದ ರಥೋತ್ಸವ ಸೊಬಗನ್ನು ಸವಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/09/2022 03:13 pm

Cinque Terre

49.31 K

Cinque Terre

0

ಸಂಬಂಧಿತ ಸುದ್ದಿ