ಕಲಘಟಗಿ : ಹುಬ್ಬಳ್ಳಿ ಇಂದ ದಾಂಡೇಲಿಗೆ ತೆರಳುವ ಕಟ್ಟಿಗೆ ತುಂಬಿದ ಲಾರಿಗಳು ಕಲಘಟಗಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿವೆ.
ಆದರೆ ಈ ಲಾರಿಗಳು ಅಪಾಯದ ರೀತಿಯಲ್ಲಿ ಕಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದು ಕಟ್ಟಿಗೆ ಹೆಚ್ಚಾಗಿ ತುಂಬಿರುವ ಕಾರಣ ಒಂದು ಕಡೆ ವಾಲುತ್ತಿದ್ದು ಪಕ್ಕದಲ್ಲಿ ವಾಹನ ಸವಾರರು ಹೋಗಲು ಭಯಪಡುವಂತಾಗಿದೆ.
ಕೆಲವು ವರ್ಷಗಳ ಹಿಂದೆ ಇದೇ ವಾಹನಗಳು ಕಲಘಟಗಿ ಇಂದ ದಾಂಡೇಲಿ ಹೋಗುವ ಮಧ್ಯೆ ಕೂಡಲಗಿ ಗ್ರಾಮದ ರಸ್ತೆಯಲ್ಲಿ ಅಪಾಯದ ರೀತಿಯಲ್ಲಿ ಕಟ್ಟಿಗೆ ತುಂಬಿಕೊಂಡು ಹೊರಡುವಾಗ ಲಾರಿ ಪಲ್ಟಿ ಆಗಿ ಪಕ್ಕದಲ್ಲಿ ಇದ್ದ ಟೆಂಪೋ ಮೇಲೆ ಬಿದ್ದು ಬಹಳಷ್ಟು ಪ್ರಯಾಣಿಕರ ಸಾವುಗಳು ಆಗಿರುವ ಘಟನೆ ನಡೆದಿದ್ದು ಇಲ್ಲಿಯ ಜನರು ಇನ್ನು ಮರೆತಿಲ್ಲ.
ಈಗ ಮತ್ತೆ ಲಾರಿಗಳು ದಿನನಿತ್ಯ ಅಪಾಯದ ರೀತಿಯಲ್ಲಿ ಕಟ್ಟಿಗೆಗಳನ್ನು ಹಾಕಿಕೊಂಡು ಸಾಗುತ್ತಿವೆ . ಅಷ್ಟೆ ಅಲ್ಲದೆ ಈಗ ಕಬ್ಬಿನ ಕಟಾವು ಪ್ರಾರಂಭ ವಾಗಿದ್ದು ಲಾರಿ ಹಾಗೂ ಟ್ರ್ಯಾಕ್ಟರ್ ನಲ್ಲಿ ಅಪಾಯದ ರೀತಿಯಲ್ಲಿ ಕಬ್ಬು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬರುತ್ತಿವೆ.
ಕೂಡಲೇ ಕಲಘಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಉಳಿದ ವಾಹನ ಸಂಚಾರರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಇಲ್ಲಿಯ ಸಾರ್ವಜನಿಕರು ತಿಳಿಸಿದ್ದಾರೆ.
ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ
Kshetra Samachara
09/12/2024 03:46 pm