ನವಲಗುಂದ : ತಾಲೂಕಿನ ಶಲವಡಿ ಗ್ರಾಮದಲ್ಲಿ ಇಂದು ಪರಮಪೂಜ್ಯ ಶ್ರೀ ಈರಯ್ಯ ಸ್ವಾಮಿಗಳು ಶಾನಭಾಗಮಠ ಶಲವಡಿ ಇವರ ದಿವ್ಯಸಾನಿಧ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದ ಅಂಗವಾಗಿ ನವಲಗುಂದ ಮಂಡಲದ ಶಲವಡಿ ಗ್ರಾಮದಲ್ಲಿ ರೈತ ಮೋರ್ಚಾವತಿ ಯಿಂದ ಗೋಮಾತಾ ಪೂಜೆ, ಗಿಡ ನೆಡುವ ಕಾರ್ಯಕ್ರಮ, ಮಕ್ಕಳಿಗೆ ನೋಟ್ ಬುಕ್ ಹಾಗೂ ಮಾಸ್ಕ್ ವಿತರಣೆ, ಪಕ್ಷದ ಹಿರಿಯರಿಗೆ ಗೌರವಾನ್ವಿತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣಾ ಹಸಬಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಷಣ್ಮುಖ ಗುರಿಕಾರ್, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದನಗೌಡ್ರ ಪಾಟೀಲ್,ಮಂಡಲ ಅಧ್ಯಕ್ಷರಾದ ಶರಣಪ್ಪಗೌಡ ದಾನಪ್ಪಗೌಡ್ರ, ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿಯಾದ ರಾಜಕುಮಾರ ಬಸವಾ, ಪಕ್ಷದ ಪ್ರಮುಖರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
19/09/2020 02:33 pm