ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:  ಆಟೋದಲ್ಲಿ ಕುಡಿಯುವ ನೀರು, ಲೈಬ್ರೆರಿ!; ಚಾಲಕನ ಹೀಗೊಂದು ಸಮಾಜಸೇವೆ ಪರಿ

"ಜನ ಸೇವೆಯೇ... ಜನಾರ್ದನ ಸೇವೆ" ಎಂಬಂತೆ ಇಲ್ಲೊಬ್ಬ ಆಟೋ ಚಾಲಕ, ಸಮಾಜ ಸೇವೆಯಲ್ಲಿಯೇ ಖುಷಿ ಕಾಣುತ್ತಿದ್ದಾರೆ. ಹೌದು...ಹೀಗೆ ಆಟೋದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಒಳಗಡೆ ಮಿನಿ ಲೈಬ್ರೆರಿ ಸಜ್ಜುಗೊಳಿಸಿ ಜನರಿಗೆ ಒಂದೊಳ್ಳೆಯ ಸಂದೇಶ ನೀಡಲು ಮುಂದಾಗಿದ್ದಾರೆ ಹುಬ್ಬಳ್ಳಿ ವೀರಾಪೂರ ಓಣಿಯ ಗೊಲ್ಲರ ಕಾಲೋನಿ ನಿವಾಸಿ ನಾಗರಾಜ್ ಶಿವಪ್ಪ ಗಬ್ಬೂರ.

ನಿರಂತರ 12 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿರುವ ನಾಗರಾಜ್‌, 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.  ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಜನರಿಗೆ  ಏನಾದರೂ ಸಹಾಯ‌ ಮಾಡಬೇಕು ಎಂಬ ಉದ್ದೇಶದಿಂದ ತಮ್ಮ ಆಟೋದಲ್ಲಿ  ಫಿಲ್ಟರ್ ನೀರಿನ ಟ್ಯಾಂಕ್ ಇಟ್ಟು ಪ್ರಯಾಣಿಕರ ದಾಹ ತೀರಿಸುತ್ತಿದ್ದಾರೆ.

ಅಲ್ಲದೆ, ಆಟೋದಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಕನ್ನಡ ಗರಿಮೆಯನ್ನು ಹೆಚ್ಚಿಸಿದ್ದಾರೆ. ತಾವು ದುಡಿದ ದುಡ್ಡಿನಲ್ಲಿ ಪ್ರತಿದಿನ 20 ರೂ. ಸಮಾಜ ಸೇವೆಗೆಂದೇ ಮುಡಿಪಾಗಿಟ್ಟಿದ್ದಾರೆ. ನಾಗರಾಜ್  ಅವರ ಕನ್ನಡದ ಮೇಲಿನ ಅಭಿಮಾನ, ಸಮಾಜಸೇವೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬುದೇ ನಮ್ಮ ಆಶಯ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/07/2022 05:01 pm

Cinque Terre

46.19 K

Cinque Terre

5

ಸಂಬಂಧಿತ ಸುದ್ದಿ