ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಚಿವ ಪ್ರಹ್ಲಾದ್ ಜೋಶಿಗೆ ಅಧಿಕಾರದ ಮದ ಏರಿದೆ :ಚಿಂಚೋರೆ ಲೇವಡಿ

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿ, ನಾಲ್ಕು ಮಂದಿ ಬಲಿ ಪಡೆದು ಎಂಪಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು, ರಾಹುಲ್ ಗಾಂಧಿ ಎಲ್ಲೇ ಪಾದಯಾತ್ರೆ ಮಾಡಿದರೂ ಅಲ್ಲಿ ಕಾಂಗ್ರೆಸ್ಗೆ ಸೋಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದರು.

ಈ ವಿಚಾರವಾಗಿ ಮಾತನಾಡಿರುವ ಚಿಂಚೋರೆ, ಜೋಶಿ ಅವರಿಗೆ ಅಧಿಕಾರದ ಮದ ಏರಿದೆ. ಅಧಿಕಾರದಿಂದಾಗಿ ಅವರಿಗೆ ನೆಲ ಕಾಣುತ್ತಿಲ್ಲ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿ ನಾಲ್ಕು ಮಂದಿ ಬಲಿ ಪಡೆದು ಅವರು ಎಂಪಿಯಾಗಿದ್ದಾರೆ. ಜೋಶಿ ಅವರಿಗೆ ಪಾದಯಾತ್ರೆ ಮಾಡಿ ಗೊತ್ತಿಲ್ಲ. ಅವರೆಲ್ಲಿ ಪಾದಯಾತ್ರೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/10/2022 04:37 pm

Cinque Terre

58.2 K

Cinque Terre

15

ಸಂಬಂಧಿತ ಸುದ್ದಿ