ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವರಾಜ್-75 ಪುಸ್ತಕ ಬಿಡುಗಡೆ; ಗಾಂಧೀಜಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸ್ವರಾಜ್-75' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಗಾಂಧಿ ಒಬ್ಬರೇ ಅಲ್ಲ‌. ದೇಶಕ್ಕೆ ಗಾಂಧೀಜಿ ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿದ್ದಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರು ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಬಂದದ್ದು. ಆದರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ ಎಂದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮ ಪಂಥೀಯರಿಂದಲೇ ಈ ದೇಶ ಹಾಳಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಕೊಡುಗೆ ನೆನಪಿಸದಿದ್ದರೆ ರೌರೌ ನರಕಕ್ಕೆ ಹೋಗ್ತೀರಾ ಎಂದು ಅವರು ಹೇಳಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/10/2022 05:09 pm

Cinque Terre

74.77 K

Cinque Terre

5

ಸಂಬಂಧಿತ ಸುದ್ದಿ