ಧಾರವಾಡ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮನದ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರಿ ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡದ ಅಲ್ಲಲ್ಲಿ ಹಾಕಿಸಿದ್ದ ಬ್ಯಾನರ್ ನಲ್ಲಿ ಯಡವಟ್ಟು ಮಾಡಿಕೊಂಡಿದ್ದರು.
ದೇಶದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಎಂದು ಹಾಕಿಸಿದ್ದರು. ಇದೀಗ ಎಲ್ಲೆಲ್ಲಿ ಬ್ಯಾನರ್ ಹಾಕಿಸಿದ್ದಾರೋ ಅಲ್ಲಲ್ಲಿ ರಾಷ್ಟ್ರದ ದ್ವಿತೀಯ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ಹಾಕಿಸುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
Kshetra Samachara
26/09/2022 12:36 pm