ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೂಲಿ ಹಣ ಬಿಡುಗಡೆ ಮಾಡಲು ಒತ್ತಾಯ

ಧಾರವಾಡ: ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ವಿವಿಧ ಯೋಜನೆಗಳಲ್ಲಿ ವಸತಿ ನಿರ್ಮಿಸಿಕೊಂಡ ಕುಟುಂಬಗಳಿಗೆ ನರೇಗಾ ಯೋಜನೆಯ ಕೂಲಿ ಹಣ ಬಿಡುಗಡೆ ಮಾಡುವುದು ಹಾಗೂ ವಸತಿ ಯೋಜನೆಯ ಬಿಲ್‌ಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಲಕಿನಕೊಪ್ಪ ಗ್ರಾಮದ ಗ್ರಾಮಸ್ಥರು ಎಐಕೆಕೆಎಂಎಸ್ ಸಂಘಟನೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಹಲವಾರು ವಸತಿ ಯೋಜನೆಗಳಡಿಯಲ್ಲಿ ಮನೆಗಳು ಮಂಜೂರಾಗಿದ್ದು, ಆಯಾ ಕುಟುಂಬದವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ವಿವಿಧ ಹಂತಗಳನ್ನೊಳಗೊಂಡು ಒಟ್ಟಾರೆ 90 ಮಾನವ ದಿನಗಳ ಕೂಲಿಯನ್ನು ಮನೆ ಮಂಜೂರಾದ ಕುಟುಂಬದವರು ತಮ್ಮ ಉದ್ಯೋಗ ಚೀಟಿಯಡಿ ಕೆಲಸ ಮಾಡಿಸಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಆದರೆ ಇದುವರೆಗೂ ಹಲವಾರು ಕುಟುಂಬಗಳಿಗೆ ಈ ನರೇಗಾ ಯೋಜನೆಯಡಿ ಬರುವ ಕೂಲಿ ಬಂದಿಲ್ಲ. ಕೆಲವು ಕುಟುಂಬಗಳಿಗೆ ಒಂದು ಅಥವಾ ಎರಡು ಹಂತದ ನರೇಗಾ ಕೂಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಇನ್ನು ಹಲವಾರು ಕುಟುಂಬಗಳಿಗೆ ವಸತಿ ಯೋಜನೆಗಳ ವಿವಿಧ ಹಂತದ ಬಿಲ್‌ಗಳು ಕೂಡಾ ಬಿಡುಗಡೆಯಾಗಿಲ್ಲ. ಕೂಡಲೇ ಈ ಬಿಲ್‌ಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

Edited By : Shivu K
Kshetra Samachara

Kshetra Samachara

07/09/2022 02:09 pm

Cinque Terre

41.55 K

Cinque Terre

0

ಸಂಬಂಧಿತ ಸುದ್ದಿ