ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪ್ರತಿಭಟನೆ ವೇಳೆ ಭಾವುಕರಾದ ಮಾಜಿ ಶಾಸಕ ಕೋನರೆಡ್ಡಿ

ನವಲಗುಂದ : ಕಳೆದ‌ ರಾತ್ರಿ ನವಲಗುಂದ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಮನೆಗಳಿಗೆ ನುಗ್ಗಿದ ನೀರಿನಿಂದ ಶೇಖರಿಸಿ, ಇಡಲಾಗಿದ್ದ ಹೆಸರು ಹಾನಿಯಾಗಿದೆ. ಈ ಹಿನ್ನೆಲೆ ಮಾಜಿ ಶಾಸಕ ಕೋನರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನವಲಗುಂದ ಪಟ್ಟಣದ ನೀಲಮ್ಮನ ಕೆರೆ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದರು. ಈ ವೇಳೆ ರೈತರ ಪರಿಸ್ಥಿತಿ ಕಂಡು ಭಾವುಕರಾದರು.

Edited By : Nagesh Gaonkar
Kshetra Samachara

Kshetra Samachara

06/09/2022 08:48 pm

Cinque Terre

86.02 K

Cinque Terre

9

ಸಂಬಂಧಿತ ಸುದ್ದಿ