ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹವಾ ಮಾಡಲು ಹೋಗಿ ರಾಷ್ಟ್ರಧ್ವಜಕ್ಕೆ ಬಿಜೆಪಿ ಮುಖಂಡ ಮೊಗಲಿಶೆಟ್ಟರ್‌ರಿಂದ ಅವಮಾನ.!

ಹುಬ್ಬಳ್ಳಿ: ಇದೇನಾ ಬಿಜೆಪಿ ಮುಖಂಡರ ದೇಶಪ್ರೇಮ..? ಬಿಜೆಪಿ ಮುಖಂಡರಿಂದಲೇ ರಾಷ್ಟ್ರ ಧ್ವಜಕ್ಕೆ ಅಪಮಾನವಾಗಿದೆ.

ಹೌದು. ಪಾಲಿಕೆ ಸದಸ್ಯೆಯ ಪತಿಯೇ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರು. ಹು-ಧಾ ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಅವರ ಪತಿ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್ ಅವರಿಂದ ರಾಷ್ಟ್ರ ಧ್ವಜಕ್ಕೆ ಅವಮಾನವಾಗಿದೆ. ತಮ್ಮ ವಾರ್ಡ್ ಜನರಿಗೆ 'ಹರ್ ಘರ್ ತಿರಂಗಾ' ಅಭಿಯಾನ ತಿಳಿಸುವ ಭರದಲ್ಲಿ ಸಿದ್ದು ಮುಗಲಿಶೆಟ್ಟರ್ ಅವರು ಒಂದು ಕೈಯಲ್ಲಿ ಧ್ವಜವನ್ನು ಎತ್ತಿ ಹಿಡಿದರೆ, ಇನ್ನೊಂದು ಕೈಯಲ್ಲಿ ಧ್ವಜವನ್ನು ಚಪ್ಪಲಿ ಮೇಲೆ ಇಟ್ಟುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಧ್ವಜದ ಮಹತ್ವವನ್ನೇ ಮರೆತು ಚಪ್ಪಲಿ ಮೇಲೆ ಇರಿಸಿದ ಸಿದ್ದು ಮುಗಲಿಶೆಟ್ಟರ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪಾಲಿಕೆ ಸದಸ್ಯೆಯ ಪತಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಬಿಜೆಪಿ ಮುಖಂಡನ ಮೇಲೆ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.

Edited By : Vijay Kumar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/08/2022 12:45 pm

Cinque Terre

78.2 K

Cinque Terre

61

ಸಂಬಂಧಿತ ಸುದ್ದಿ