ಧಾರವಾಡ: ಧಾರವಾಡದ ಟಾಟಾ ಮಾರ್ಕೊಪೊಲೊ ಕಂಪೆನಿಯ ಉದ್ಯೋಗಿಗಳು ಹಾಗೂ ಕಂಪೆನಿ ಆಡಳಿತ ಮಂಡಳಿ ಮಧ್ಯೆ ಇರುವ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಕಂಪೆನಿ ತಮಗೆ ಇನ್ನೂ ಹಲವಾರು ಸವಲತ್ತುಗಳನ್ನು ಕೊಡಬೇಕಿದ್ದು, ಆ ಸವಲತ್ತುಗಳನ್ನು ನೀಡದೇ ವಂಚಿಸುತ್ತಿದೆ ಎಂದು ಆರೋಪಿ ಅಲ್ಲಿನ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಶುಕ್ರವಾರವೂ ಉದ್ಯೋಗಿಗಳು ಕಂಪೆನಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೆ ತಮ್ಮ ಕುಟುಂಬ ಸಮೇತರಾಗಿ ಎಐಟಿಯುಸಿ ನೇತೃತ್ವದಲ್ಲಿ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕಂಪೆನಿ ತನ್ನ ಆಡಳಿತ ಮಂಡಳಿ ಸದಸ್ಯರ ವೇತನವನ್ನು ಹೆಚ್ಚಳ ಮಾಡಿಕೊಳ್ಳುತ್ತದೆ. ಆದರೆ, ಕಾರ್ಮಿಕರ ವೇತನ ಹೆಚ್ಚಳದ ಬಗ್ಗೆ ಚಕಾರವೆತ್ತುವುದಿಲ್ಲ. ಈ ಕಂಪೆನಿಯ ಅಧಿಕಾರವನ್ನು ನೋಡಿದರೆ, ಕಾರ್ಮಿಕ ಇಲಾಖೆಯೇ ಬೇಲಿ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ.
ಕಾರ್ಮಿಕರ ಹಿತ ಕಾಪಾಡುವಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತ ಬರಲಾಗುತ್ತಿದ್ದರೂ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಲಾಗಿದೆ ಕೂಡಲೇ ವೇತನ ಹೆಚ್ಚಳ ಮಾಡಬೇಕು. ಕಂಪೆನಿಯಲ್ಲಾಗುವ ಶೋಷಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
Kshetra Samachara
12/08/2022 08:21 pm