ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 2ಎ ಮೀಸಲಾತಿಗಾಗಿ ಶೆರೇವಾಡ ಬಳಿ ರಾಜ್ಯ ಹೆದ್ದಾರಿ ಬಂದ್ !

ಕುಂದಗೋಳ: 2ಎ ಮೀಸಲಾತಿಗೆ ಆಗ್ರಹಿಸಿ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಆದೇಶದಂತೆ ಸ್ಥಳೀಯ ಮಟ್ಟದಲ್ಲಿ ಇಂದು ಪಂಚಮಸಾಲಿ ಹೋರಾಟಗಾರರು ಕೈಗೊಂಡ ಪ್ರತಿಭಟನೆ ಸಾರ್ವಜನಿಕರನ್ನು ಕಾಡಿದೆ.

ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶರೇವಾಡ ಗ್ರಾಮದ ಬಳಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ರಸ್ತೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಘೋಷಣೆ ಕೂಗಿದರು.

ಜೈ ಪಂಚಮಸಾಲಿ... ಜೈ ಜೈ.. ಪಂಚಮಸಾಲಿ ಎಂದು ಘೋಷಣೆ ಕೂಗಿ ಮೀಸಲಾತಿಗೆ ಆಗ್ರಹಿಸಿದರು. ಪಂಚಮಸಾಲಿ ಸಮುದಾಯದವರು ರಸ್ತೆ ತಡೆ ನಡೆಸಿದ ಕಾರಣ ಸಾರಿಗೆ ಬಸ್ ಸಂಚಾರ, ಖಾಸಗಿ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಕ್ಷಣಕಾಲ ಪರದಾಡಿದರು. ಅಲ್ಲದೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಬಳಿಕ ಪೊಲೀಸರು ಪ್ರತಿಭಟನಾ ನಿರತರನ್ನು ಮನವೂಲಿಸಿ ರಸ್ತೆ ತಡೆ ನಿಲ್ಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Edited By : Manjunath H D
Kshetra Samachara

Kshetra Samachara

12/12/2024 03:03 pm

Cinque Terre

9.12 K

Cinque Terre

0

ಸಂಬಂಧಿತ ಸುದ್ದಿ