ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿದ್ದರಾಮೋತ್ಸವಕ್ಕೆ ಧಾರವಾಡದಿಂದ ತೆರಳಿತು ದೀಪಕ ದಂಡು

ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು 75ರ ಸಂಭ್ರಮ. ಸಿದ್ದರಾಮಯ್ಯನವರ ಈ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಪಕ್ಷ ಒಂದು ಜಾತ್ರೆಯಂತೆ ಸಂಭ್ರಮಿಸುತ್ತಿದೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವಕ್ಕೆ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ ದೀಪಕ ಚಿಂಚೋರೆ ಅವರ ದಂಡೇ ಅಲ್ಲಿಗೆ ತೆರಳಿದೆ.

ದೀಪಕ ಚಿಂಚೋರೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಸಿದ್ದರಾಮಯ್ಯನವರ ಜನ್ಮದಿನದ ಅಂಗವಾಗಿ ಈ ಸಿದ್ದರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನ ಅಲ್ಲಿಗೆ ತೆರಳುತ್ತಿದ್ದಾರೆ. ದೀಪಕ ಚಿಂಚೋರೆ ಕೂಡ ತಮ್ಮ ಕ್ಷೇತ್ರದ ಜನರು ದಾವಣಗೆರೆಗೆ ತೆರಳುವುದಕ್ಕಾಗಿ ಧಾರವಾಡದ ಕೆ.ಇ.ಬೋರ್ಡ್ ಕಾಲೇಜು ಮೈದಾನದಿಂದ ವಾಹನ ವ್ಯವಸ್ಥೆ ಮಾಡಿದ್ದರು. ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಕ್ರೂಸರ್, ಟೆಂಪೊ ಟ್ರಾವೆಲರ್‌ಗಳ ವ್ಯವಸ್ಥೆಯನ್ನೂ ದೀಪಕ ಅವರು ಮಾಡಿದ್ದರು. ಈ ವಾಹನಗಳ ಮೂಲಕ ಪಶ್ಚಿಮ ಕ್ಷೇತ್ರದಿಂದ ಸಾವಿರಾರು ಜನ ದಾವಣಗೆರೆಗೆ ತೆರಳಿದ್ದಾರೆ. ಸಿದ್ದರಾಮಯ್ಯ ಒಬ್ಬ ಜನಪ್ರಿಯ ನಾಯಕರು. ಅವರ ಈ ಹುಟ್ಟುಹಬ್ಬವನ್ನು ನಾವು ಜಾತ್ರೆಯಂತೆ ಆಚರಿಸುತ್ತಿದ್ದೇವೆ ಎಂದು ದೀಪಕ ಚಿಂಚೋರೆ ಹೇಳಿದರು.

ಧಾರವಾಡದ ಕೆ.ಇ.ಬೋರ್ಡ್ ಕಾಲೇಜು ಮೈದಾನದಿಂದ ನೂರಾರು ವಾಹನಗಳ ಮೂಲಕ ಸಾವಿರಾರು ಜನರನ್ನು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕೊಂಡೊಯ್ಯುವ ಮೂಲಕ ದೀಪಕ ಚಿಂಚೋರೆ ತಮ್ಮದೇ ಆದ ರೀತಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಹುಬ್ಬಳ್ಳಿ, ಧಾರವಾಡದ ಅನೇಕ ಕಾಂಗ್ರೆಸ್ ಮುಖಂಡರು ಸಹ ದೀಪಕ ಅವರಿಗೆ ಕೈಜೋಡಿಸಿದರು. ಸಿದ್ದರಾಮೋತ್ಸವಕ್ಕೆ ಬರುವ ಎಲ್ಲ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆನ್ನೂ ದೀಪಕ ಅವರ ತಂಡ ಅಚ್ಚುಕಟ್ಟಾಗಿ ಮಾಡಿತ್ತು. ಒಟ್ಟಾರೆಯಾಗಿ ದೀಪಕ ಚಿಂಚೋರೆ ಅವರು ದಾವಣಗೆರೆಗೆ ತಮ್ಮದೇ ಜನ ಬೆಂಬಲದೊಂದಿಗೆ ದಾವಣಗೆರೆಗೆ ತೆರಳಿದ್ದು, ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ತೀವ್ರ ಸಂಚಲನವನ್ನುಂಟು ಮಾಡುವಂತೆ ಮಾಡಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/08/2022 02:46 pm

Cinque Terre

47.39 K

Cinque Terre

6

ಸಂಬಂಧಿತ ಸುದ್ದಿ