ಕುಂದಗೋಳ: ಸರ್ಕಾರವು ಆಹಾರ ಪದಾರ್ಥಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿಯನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ಮುಖಂಡರು ಇಂದು ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅಕ್ಕಿ, ರಾಗಿ, ಮೊಸರು, ಮಜ್ಜಿಗೆಯಂತಹ ಆಹಾರ ಮತ್ತು ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿದರೆ ಕಡು ಬಡವರ ಜೀವನ ಕಷ್ಟವಾಗುತ್ತದೆ. ಈಗಾಗಲೇ ರಾಜ್ಯಾದ್ಯಂತ ಕಡು ಬಡವರ ಸಂಖ್ಯೆ 10.2 ಇದ್ದು ಸರ್ಕಾರ ಅಪೌಷ್ಟಿಕತೆ, ಗರೀಬ್ ಕಲ್ಯಾಣ್, ಎಂಬ ಹೆಸರಿನಡಿ ಒಂದಡೆ ಉಚಿತವಾಗಿ ಆಹಾರ ಸಾಮಗ್ರಿ ನೀಡಿದ್ರೆ ಒಂದಡೆ ಜಿಎಸ್‌ಟಿ ಮೂಲಕ ಅದನ್ನು ವಸೂಲಿ ಮಾಡಲು ಹೊರಟಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಮಹಾಬಳೇಶ ಮಾಸನಕಟ್ಟಿ ಹೇಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮಾರುತಿ ವಡ್ಡರ, ಸಿದ್ದಯ್ಯ ಪೂಜಾರ, ಸಂತೋಷ ಮಲ್ಲಿಗವಾಡ ಇತರರು ಉಪಸ್ಥಿತರಿದ್ದರು.
Kshetra Samachara
19/07/2022 04:50 pm