ಧಾರವಾಡ: ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಪೂಜಾ ದಾಬಾದಿಂದ ಟೋಲಗೇಟ್‌ವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆ ರಿಪೇರಿ ಆಗುವವರೆಗೂ ಟೋಲ್ ಕಟ್ಟೋದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಟೋಲ್‌ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ರಸ್ತೆ ಅಳ್ನಾವರ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಪೂಜಾ ದಾಬಾದಿಂದ ಟೋಲಗೇಟ್‌ವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಹೀಗಿದ್ದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಈ ರಸ್ತೆ ಸರಿ ಮಾಡಿಸುವವರೆಗೂ ಟೋಲ್ ಕಟ್ಟಬೇಡಿ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಕೆಲಹೊತ್ತು ಟೋಲ್‌ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
Kshetra Samachara
14/07/2022 11:32 am