ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಸರ್ಕಾರದ ವಿರುದ್ಧ ಮುತಾಲಿಕ್ ವಾಗ್ದಾಳಿ

ಧಾರವಾಡ: ಒಬ್ಬ ಮಾಜಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮೇಲಿಂದ ಮೇಲೆ ದಾಳಿ ಆಗುತ್ತಲೇ ಇದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮಾಜ ಬಹಳ ಸೊಕ್ಕಿಗೆ ಬಂದಿದೆ. ಅವರು ಅತ್ಯಂತ ಸೊಕ್ಕಿನಿಂದ ವರ್ತಿಸುತ್ತಿದ್ದಾರೆ. ಅವರಿಗೆ ಭಯ ಇಲ್ಲದಂತಾಗಿದೆ. ಎಲ್ಲಿಯವರೆಗೆ ಅವರ ಮೇಲೆ ಸರ್ಕಾರ ಕ್ರಮ ಕೈಗೊಂಡು ಹದ್ದುಬಸ್ತಿನಲ್ಲಿಡುವುದಿಲ್ಲವೋ ಅಲ್ಲಿಯವರೆಗೂ ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಶಿವಮೊಗ್ಗದ ಹರ್ಷಾ ಕೊಲೆ ಮಾಡಿದವರು ಜೈಲಿನಲ್ಲಿ ಆನಂದವಾಗಿದ್ದಾರೆ. ಬಾಗಲಕೋಟೆಯ ಕೆರೂರಿನಲ್ಲಿ ಆದ ಘಟನೆ ನೋಡಿದರೆ ಸರ್ಕಾರದ ದೌರ್ಬಲ್ಯ ಎಷ್ಟಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆದಾಗ ನಾಯಕರು ಬಂದು ದೊಡ್ಡ ಪ್ರಮಾಣದಲ್ಲಿ ಮಾತನಾಡಿ ಹೋದರೆ ಮುಗಿಯುವುದಿಲ್ಲ. ಅದನ್ನು ಫಾಲೋಅಪ್ ಮಾಡಬೇಕು. ಈಗ ಶಿವಮೊಗ್ಗದಲ್ಲಿ ಮತ್ತೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಮುಸ್ಲಿಂರ ಮನೆಯಲ್ಲಿ ಮಾರಕಾಸ್ತ್ರಗಳಿವೆ. ಅವನ್ನೆಲ್ಲ ಸೀಜ್ ಮಾಡುತ್ತಿಲ್ಲ ಏಕೆ? ಸಂಘ ಪರಿವಾರದ ಭದ್ರಕೋಟೆಯಾದ ಶಿವಮೊಗ್ಗದಲ್ಲೇ ಈ ರೀತಿಯಾದರೆ ಬೇರೆ ಕಡೆ ಪರಿಸ್ಥಿತಿ ಏನಾಗಿರಬಹುದು? ಯುಪಿ ಸಿಎಂ ಯೋಗಿ ರೀತಿಯಲ್ಲಿ ನಮ್ಮ ಸರ್ಕಾರ ಕೂಡ ಗಟ್ಸ್ ತೋರಿಸಬೇಕು ಎಂದು ಆಗ್ರಹಿಸಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/07/2022 11:01 pm

Cinque Terre

121.23 K

Cinque Terre

18

ಸಂಬಂಧಿತ ಸುದ್ದಿ