ಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ಪೈಪೋಟಿಗೆ ಬ್ರೇಕ್ ಬಿದ್ದಿದ್ದು, ಮೇಯರ್ ಸ್ಥಾನದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣ್ಣಕ್ಕೆ ಇಳಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೇಲುಗೈ ಸಾಧಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬೆಂಬಲಿಗ ಈರೇಶ ಅಂಚಿಟಗೇರಿ ಹೆಸರು ಅಂತಿಮಗೊಂಡಿದೆ. ಧಾರವಾಡದ ವಾರ್ಡ್ ನಂ.4ರ ಈರೇಶ ಅಂಚಿಟಗೇರಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಹುಬ್ಬಳ್ಳಿಯ 44ನೇ ವಾರ್ಡ್ ಸದಸ್ಯೆ ಉಮಾ ಮುಕುಂದ ಉಪಮೇಯರ್ ಆಗಿ ಸ್ಪರ್ಧೆ ಇಳಿಯಲಿದ್ದಾರೆ.
ಒಟ್ಟಿನಲ್ಲಿ ಮೇಯರ್, ಉಪ ಮೇಯರ್ ಇಬ್ಬರೂ ಪ್ರಹ್ಲಾದ ಜೋಶಿ ಬೆಂಬಲಿಗರಾಗಿದ್ದು, ನಾಲ್ವರು ನಾಯಕರ ಪೈಕಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೇಲುಗೈ ಸಾಧಿಸಿದಂತಾಗಿದೆ.
Kshetra Samachara
28/05/2022 10:36 am