ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೋಲಿನ ಭಯ ನನಗಿಲ್ಲ: ಹೊರಟ್ಟಿ

ಧಾರವಾಡ: ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಸೋಲಿನ ಭಯದಿಂದ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ ಎಂದರು.

ಬಿಜೆಪಿ ಇನ್ನೂ ಹಲವರು ಬರುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿಗೆ ಇನ್ನೂ ಹಲವರು ಬರುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರೆ ಅದು ಅಧಿಕೃತ ವ್ಯಕ್ತಿ ಹೇಳಿದಂತೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/05/2022 06:11 pm

Cinque Terre

64.44 K

Cinque Terre

7

ಸಂಬಂಧಿತ ಸುದ್ದಿ