ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊರಟ್ಟಿಗೆ ಟಿಕೆಟ್ ಫೈನಲ್; ಶಾಸಕ ಅರವಿಂದ ಬೆಲ್ಲದ

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ವಿಚಾರವಾಗಿ ನಮ್ಮ ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ. ಟಿಕೆಟ್ ಹೊರಟ್ಟಿ ಅವರಿಗೆ ಫೈನಲ್ ಆಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ. ಮೋಹನ್ ಲಿಂಬಿಕಾಯಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ ಎಂದರು.

ಟಿಕೆಟ್ ಫೈನಲ್ ಆಗೋದಕ್ಕಿಂತ ಮುಂಚೆ ಬಿಜೆಪಿ ಕಚೇರಿ ಉದ್ಘಾಟನೆ ವಿಚಾರವಾಗಿ ಚುನಾವಣೆ ಕೆಲಸ ಬಹಳ ಇರುತ್ತದೆ. ಹೀಗಾಗಿ ಕಚೇರಿ ಆರಂಭಿಸಿದ್ದಾರೆ. ನಿನ್ನೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿದ್ದಾರೆ. ಟಿಕೆಟ್ ಸಿಗುವ ಭರವಸೆಯ ಅವರಿಗಿದೆ. ಹೀಗಾಗಿ ಸಿದ್ಧತೆ ನಡೆಸಿದ್ದಾರೆ. ಇನ್ನು ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯೋ ವಿಚಾರವಾಗಿ, ಅದನ್ನು ನೀವು ಅವರಿಗೆ ಕೇಳಬೇಕು ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಶಾಸಕ ಬೆಲ್ಲದ ಹೇಳಿದರು.

Edited By : Manjunath H D
Kshetra Samachara

Kshetra Samachara

22/05/2022 03:07 pm

Cinque Terre

80.01 K

Cinque Terre

5

ಸಂಬಂಧಿತ ಸುದ್ದಿ