ಧಾರವಾಡ: ಧಾರವಾಡ ಹೊರವಲಯದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದ ಗಲಾಟೆ ಪ್ರಕರಣ ಹಿನ್ನೆಲೆ, ಪ್ರತಿದೂರು ನೀಡಿದರು ವ್ಯಾಪರಿ ನಬಿಸಾಬ್ ಕಿಲ್ಲೇದಾರ್ ಮೇಲೆ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಗ್ರಹಿಸಿದ್ದಾರೆ.
ನುಗ್ಗಿಕೇರಿ ದೇವಸ್ಥಾನದ ಆವರಣದ ನಡೆದ ಪ್ರಕರಣ ವಿಚಾರವಾಗಿ ಎಸ್ಪಿ ಕೃಷ್ಣಕಾಂತ ಅವರಿಂದ ಗಲಾಟೆ ಮಾಹಿತಿ ತಿಳಿದುಕೊಂಡು ಧಾರವಾಡದಲ್ಲಿ ಎಸ್ಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಲ್ಲಂಗಡಿ ವ್ಯಾಪಾರಿ ನಬಿಸಾಬ್ ಮೇಲೆ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟರು, ಇನ್ನು ಆಗದ ಎಪ್ ಐ ಆರ್ ದಾಖಲೆ ಕೂಡಲೇ ನಮ್ಮ ದೂರಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡೆಸಿದರು.
ನಬೀಸಾಬ್ ಕಿಲ್ಲೆದಾರ ವಿರುದ್ದ ಮಹಾಲಿಂಗ್ ಐಗಳಿ ದೂರು ನೀಡಿದ್ದರು ಕೂಡ ಆತನ ಮೇಲೆ ಎಫ್ ಐ ಆರ್ ದಾಖಲಿಸಿಲ್ಲ. ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೇಸ್ ಆರೋಪ ಮಾಡಿದ್ದರು. ಕೂಡಲೇ ಪ್ರತಿದೂರು ಅನ್ವಯ ಪ್ರಕರಣ ದಾಖಲಿಸಿಕೊಂಡು, ನಬಿಸಾಬ್ ಮೇಲೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/04/2022 03:28 pm