ಹುಬ್ಬಳ್ಳಿ: ಬಿಜೆಪಿಯವರು ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ವಿಷಯಾಂತರ ಮಾಡಲು ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇದು ಬಿಜೆಪಿ ಪ್ರಾಯೋಜಿತ ಗಲಾಟೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ ಕೊಡ್ಲಿಪೇಟೆ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ತನ್ನ ಅವ್ಯವಹಾರದ ಆರೋಪಿಗಳನ್ನು ಮುಚ್ಚಿ ಹಾಕಲು ಈ ರೀತಿಯಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದೆ. ಈಗ ಕೆ.ಎಸ್.ಈಶ್ವರಪ್ಪ ಅವರ ಕಿರುಕುಳದಿಂದ ಬೇಸತ್ತ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ವಿಷಯಾಂತರ ಮಾಡಲು ಈ ಒಂದು ಹುನ್ನಾರ ಮಾಡಿದ್ದಾರೆ ಇದು ಬಿಜೆಪಿ ಪ್ರಾಯೋಜಿತ ಗಲಾಟೆ ಎಂದರು.
ಶಾಂತಿ ಸೌಹಾರ್ದತೆಯಿಂದ ಕೂಡಿದ್ದ ಹುಬ್ಬಳ್ಳಿಯಲ್ಲಿ ಒಬ್ಬ ಕಿಡಗೇಡಿ ಮುಸ್ಲಿಂ ಸಮುದಾಯದ ಪವಿತ್ರ ಮೆಕ್ಕಾ ಮದೀನಾದ ಮೇಲೆ ಕೇಸರಿ ಧ್ವಜ ಹಾರಿಸಿದ ವಿಡಿಯೋ ಪೋಸ್ಟ್ ಮಾಡಿದ್ದ ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಅವನ ವಿರುದ್ಧ ಎಫ್ ಐ ಆರ್ ದಾಖಲು ಮಾಡುವಂತೆ ಪಟ್ಟು ಹಿಡಿದಿದ್ದರೂ ಸಂಜೆ 6-30ರ ಸುಮಾರಿಗೆ ನಡೆದ ಘಟನೆಗೆ ರಾತ್ರಿ 10 ಗಂಟೆ ಆದರೂ ಎಫ್ಐಆರ್ ದಾಖಲು ಮಾಡದೇ ಇರುವುದಕ್ಕೆ ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಲಾಗಿದೆ. ಅಲ್ಲದೇ ಕಲ್ಲು ತೂರಾಟ ಮಾಡಿದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.
Kshetra Samachara
21/04/2022 01:20 pm