ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ APMC ಅಧ್ಯಕ್ಷರ ಅವಧಿ ಮುಕ್ತಾಯ-ಆಡಳಿತಾಧಿಕಾರಿಯಾಗಿ ತಹಶೀಲ್ದಾರ ನೇಮಕ

ಅಣ್ಣಿಗೇರಿ: ಪಟ್ಟಣದ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರುಗಳು ಅಧಿಕಾರದ ಅವಧಿ ಮುಕ್ತಾಯಗೊಂಡಿದ್ದು, ಆಡಳಿತಾಧಿಕಾರಿಗಳನ್ನಾಗಿ ತಾಲೂಕು ತಹಶೀಲ್ದಾರ್ ಮಂಜುನಾಥ್ ಅಮಾಸೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ.

ಮುಂಬರುವ ಎಪಿಎಂಸಿ ಚುನಾವಣೆಯ ಮತದಾರರ ಪಟ್ಟಿ ತಯಾರಾಗಿದ್ದು,ಮತಗಟ್ಟೆಗಳನ್ನು ಸಹ ಗುರುತಿಸಲಾಗಿದೆ.ನವಲಗುಂದ ಮುತ್ತು ಅಣ್ಣಿಗೇರಿ ಕ್ಷೇತ್ರದಲ್ಲಿ 114 ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದ್ದು, 92,617 ಮತದಾರರು ಈ ಸಲ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಚುನಾವಣೆ ಏಪ್ರಿಲ್ ಎರಡನೇ ವಾರದ ನಂತರ ನಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Edited By :
Kshetra Samachara

Kshetra Samachara

24/03/2022 05:30 pm

Cinque Terre

11.67 K

Cinque Terre

0

ಸಂಬಂಧಿತ ಸುದ್ದಿ