ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ ನೇಮಕ ಪ್ರಕ್ರಿಯೆ ಮಾ.15 ರೊಳಗಾಗಿ ಪೂರ್ಣಗೊಳಿಸದಿದ್ದರೆ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೇಯರ-ಉಪ ಮೇಯರ ನೇಮಕ ವಿಷಯದಲ್ಲಿ ಬಿಜೆಪಿ ಸರಕಾರದ ಧೋರಣೆಗಳನ್ನು ಖಂಡಿಸಿದರು.
ಇತ್ತೀಚೆಗೆ ಮೇಯರ-ಉಪ ಮೇಯರ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಆದರೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿ ಇಲ್ಲದೇ ಮೂರು ವರ್ಷಗಳಾಗಿವೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಆರೋಪಿಸಿದರು.
ಪಾಲಿಕೆಗೆ ಸುಮಾರು 150 ಕೋಟಿ ನೀರಿನ ತೆರಿಗೆ ಬರಬೇಕಿದೆ. ಇದರಲ್ಲಿ ಅಂದಾಜು 70 ಕೋಟಿ ಬಡ್ಡಿ ಇದೆ. ಇದು ಕಡುಬಡವರಿಗೆ ಹೊರೆಯಾಗಿದೆ, ಆದ್ದರಿಂದ ಸರಕಾರ ಒಂದು ಬಾರಿ ನೀರಿನ ತೆರಿಗೆಯನ್ನು ಮನ್ನಾ ಮಾಡಬೇಕು. ಇದರಿಂದ ಜನರಿಗೆ ಅನುಕೂಲ ಆಗಲಿದೆ. ಅವಳಿ ನಗರ ಧೂಳು ಮುಕ್ತ ನಗರವಾಗಬೇಕು ಎಂದರು.
Kshetra Samachara
07/03/2022 09:21 am