ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಶಾಸಕ ನಿಂಬಣ್ಣವರ್ ಚಾಲನೆ

ಕಲಘಟಗಿ: ತಾಲೂಕಿನ ಸಲ್ಲಾಪುರ್ ನರ್ಸರಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಶಾಸಕ ಸಿಎಂ ನಿಂಬಣ್ಣವರ್ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, 5 ಕೋಟಿ ಅನುದಾನದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ನಿರ್ಮಿಸಲಾಗುತ್ತಿದ್ದು, ಹಂತಹಂತವಾಗಿ ಅನುದಾನವನ್ನು ನೀಡಲಾಗುವುದು. ಸದ್ಯಕ್ಕೆ ಹದಿಮೂರುವರೆ ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು.

ಉದ್ಯಾನವನದಲ್ಲಿ ಮಕ್ಕಳಿಗಾಗಿ ಆಟವಾಡಲು ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು. ದೊಡ್ಡವರಿಗೆ ಮರಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಆರ್ಯ ಶ್ರೀಕಾಂತ್ ಪಾಟೀಲ್ ತಿಳಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಕಡೆಮನಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಗಂಗಪ್ಪ ಗವಳಿ ಸುನೀಲ ಗಬ್ಬುರ ಲಕ್ಷ್ಮಣ ಬೆಟಗೇರಿ ಸಿಬ್ಬಂದಿ ಇದ್ದರು.

Edited By : Vijay Kumar
Kshetra Samachara

Kshetra Samachara

02/02/2022 07:57 am

Cinque Terre

10.77 K

Cinque Terre

2

ಸಂಬಂಧಿತ ಸುದ್ದಿ