ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಮ್.ಬಿ.ಚೆಟ್ಟಿ ಅವರು ವಿವಿಯ ಕಾಯ್ದೆ ಮತ್ತು ಶಾಸನವನ್ನು ಪಾಲಿಸದೇ ಮನಸೋಯಿಚ್ಛೆ ನಡೆಸುಕೊಳ್ಳುತ್ತಿದ್ದಾರೆ. ಅವರನ್ನು ಸರ್ಕಾರ ಕೂಡಲೇ ಅಧಿಕಾರದಿಂದ ವಜಾ ಮಾಡಬೇಕೆಂದು ಧಾರವಾಡ ಕೃ.ವಿ.ವಿ ಶಿಕ್ಷಕರ ಕಲ್ಯಾಣ ಸಂಘದ ಕಾರ್ಯದರ್ಶಿ ಮಹಾಂತೇಶ ನಾಯಕ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಒಂದಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬರುತ್ತಿದೆ. ಆದರೆ ವಿವಿಗೆ ಡಾ.ಎಮ್.ಬಿ.ಚೆಟ್ಟಿ ಅವರು ಕುಲಪತಿಗಳಾಗಿ ನೇಮಕವಾದ ನಂತರ ವಿಶ್ವವಿದ್ಯಾಲಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ದೇಶದ ಮಟ್ಟದಲ್ಲಿ 2019-20ನೇ ಸಾಲಿನಲ್ಲಿ 9 ಸ್ಥಾನದಲ್ಲಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ 2020-21ರಲ್ಲಿ 17ಕ್ಕೆ ಇಳಿದಿದೆ. ಅಲ್ಲದೇ ವಿವಿಯಲ್ಲಿ ಸಿಬ್ಬಂದಿ ಬಡ್ತಿ, ಶಿಕ್ಷಕರ ಬೇಡಿಕೆ ಇಡೇರಿಸಲು ಕನಿಷ್ಠ ಪ್ರಯತ್ನ ಕೂಡ ಆಗಿಲ್ಲ ಎಂದು ಆರೋಪಿಸಿದರು.
ಅಲ್ಲದೇ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು 2014ರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕಳಂಕಿತರಾದ ಅವರನ್ನು ಸಂವಿಧಾನಿಕ ಹುದ್ದೆಯಲ್ಲಿ ಮುಂದುವರೆಸಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ಅವರನ್ನು ಕುಲಪತಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಒತ್ತಾಯಿಸಿದರು.
Kshetra Samachara
28/01/2022 03:14 pm