ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ದಲಿತ ಯುವಕನ ಮೇಲೆ ಹಲ್ಲೆ: ತಹಶೀಲ್ದಾರ್‌ಗೆ ಮನವಿ

ಅಣ್ಣಿಗೇರಿ; ಮೈಸೂರು ಜಿಲ್ಲೆ ತಾಲೂಕಿನ ಅರಶಿನ ಕೆರೆಯ ಗ್ರಾಮದಲ್ಲಿ ಪಾನಿಪುರಿ ತಿನ್ನಲು ಹೋಗಿದ್ದ ಪ್ರಸನ್ನ ಎಂಬ ದಲಿತ ಯುವಕನ ಮೇಲೆ ದುಷ್ಕರ್ಮಿಗಳ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.ಕಾರಣ ಪ್ಲೇಟನ್ನು ಯಾಕೆ ಕಸದ ತೊಟ್ಟಿಗೆ ಹಾಕಿರುವುದಿಲ್ಲ ಎಂದು,

ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಅಣ್ಣಿಗೇರಿ ತಾಲೂಕು ಘಟಕದ ವತಿಯಿಂದ ತಹಸಿಲ್ದಾರ್ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಕೊಡಲಾಯಿತು. ಹಾಗೂ ಆರೋಪಿತರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಮತ್ತು ಅಂತಿಮ ತೀರ್ಪಿನವರೆಗೆ ಜಾಮೀನು ಸಿಗದಂತೆ ಕಾನೂನು ಇಲಾಖೆ ನಿರ್ವಹಿಸ ಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರಾಘವೇಂದ್ರ ರಾಮಗಿರಿ, ಉಪಾಧ್ಯಕ್ಷ ರಾಜು ಹಳ್ಳಿಕೇರಿ, ಪ್ರಧಾನ ಕಾರ್ಯದರ್ಶಿ ರಘು ಅಬ್ಬಿಗೇರಿ, ಸಂಘಟನಾ ಸಂಚಾಲಕರಾದ ಸುಭಾಸ್ ಬೇವಿನಕಟ್ಟಿ,ಕಾರ್ಯದರ್ಶಿ ರವಿ ಹಳ್ಳಿಕೇರಿ,ಬಾಲಾಜಿ ಹಳ್ಳಿಕೇರಿ, ಹುಲಿಗೇಶ ಹಳ್ಳಿಕೇರಿ, ಮುತ್ತು ಮುತ್ತಲಗೇರಿ,ಶಿವು ಚಿನ್ನಿ ವಡ್ಡರ, ಗಿಡ್ಡಪ್ಪ ವಡ್ಡರ್ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

21/01/2022 06:40 pm

Cinque Terre

30.9 K

Cinque Terre

2

ಸಂಬಂಧಿತ ಸುದ್ದಿ