ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡದೇ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಒಂದು ರಾಜ್ಯಕ್ಕೆ ಹೋದಾಗ ಅನ್ಯ ಕಾರಣಗಳನ್ನು ನೀಡಿ ಸೂಕ್ತ ಭದ್ರತೆ ನೀಡದಿರುವುದು ಖಂಡನೀಯ. ಇದು ಅತ್ಯಂತ ನಾಚಿಗೆಗೇಡಿನ ವಿಷಯವಾಗಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರ ಈ ರೀತಿಯಾಗಿ ರಾಜಕಾರಣ ಮಾಡಬಾರದು ಎಂದರು.
ರಾಜಕೀಯ ಇರಬೇಕು ಆದರೆ, ಈ ರೀತಿಯಾದ ಕೆಳಮಟ್ಟದ ರಾಜಕಾರಣ ಮಾಡಬಾರದು. ಇದು ದೇಶದ ಜನರಿಗೆ ಹಾಗೂ ಪ್ರಧಾನಿಗೆ ಅಪಮಾನ ಮಾಡುವಂತಹ ಕೆಲಸ. ಹೀಗಾಗಿ ಈ ಘಟನೆಯನ್ನು ಬಿಜೆಪಿ ಹಾಗೂ ಜನಸಾಮಾನ್ಯರು ಅತ್ಯಂತ ಗಂಭೀರವಾಗಿ ಖಂಡಿಸುತ್ತೇವೆ ಎಂದರು.
ಹು-ಧಾ ಮಹಾನಗರದಲ್ಲಿ ರಾಜ್ಯ ಕಾರ್ಯಕಾರಣಿ ನಡೆದಾಗ ನನಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ನಾನು ಕಾರ್ಯಕಾರಿಯ ಉದ್ಘಾಟನೆಗೆ ಬಂದು ಹೋದೆ. ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೆ, ಅವರೇ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಅದರಂತೆ ನಾನು ಮನೆಯಲ್ಲಿದ್ದು, ವಿಶ್ರಾಂತಿ ಪಡೆದಿದ್ದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2022 10:10 pm