ನವಲಗುಂದ : ಜೆಡಿಎಸ್ ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಖಚಿತವಾದ ಹಿನ್ನೆಲೆ ಭಾನುವಾರ ನವಲಗುಂದದಲ್ಲಿ ನಡೆದ ಸಭೆವೊಂದರಲ್ಲಿ ಅವರ ಕಾರ್ಯಕರ್ತರು ಸಹ ಜೈ ಎಂದಿದ್ದಾರೆ.
ಹೌದು ನವಲಗುಂದದಲ್ಲಿ ಕೋನರಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಇದೆ ತಿಂಗಳ 14 ರಂದು ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ತಿಳಿಸಿದರು. ಈ ನಿರ್ಣಯಕ್ಕೆ ಕೋನರಡ್ಡಿ ಅವರ ಕಾರ್ಯಕರ್ತರು ಸಹ ಕೈ ಜೋಡಿಸಿದ್ದು, ಈಗ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.
Kshetra Samachara
12/12/2021 09:55 pm