ಧಾರವಾಡ: ನಾಳೆ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ಜರುಗಲಿದ್ದು, ಬಿಜೆಪಿಯಿಂದ ಪ್ರದೀಪ್ ಶೆಟ್ಟರ್ ಸ್ಪರ್ಧೆ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಇದಕ್ಕೆ ಮತದಾನ ಮಾಡಲಿದ್ದು, ಮತದಾರರನ್ನು ಸೆಳೆಯುವುದಕ್ಕೋಸ್ಕರ ಬಿಜೆಪಿ ವತಿಯಿಂದ ಪ್ರತಿಯೊಬ್ಬ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಫೋನ್ ಕರೆ ಮಾಡಿ ಮತಯಾಚನೆ ಮಾಡಲಾಗುತ್ತಿದೆ.
ಅದೇ ರೀತಿ ಧಾರವಾಡ ಬಿಜೆಪಿ ಕಾರ್ಯಾಲಯದಿಂದ ಮನಗುಂಡಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ್ ಎನ್ನುವವರಿಗೆ ಫೋನ್ ಕರೆ ಮಾಡಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಅವರಿಗೆ ಮತ ಹಾಕುವಂತೆ ಮನವಿ ಮಾಡಲಾಗಿದೆ.
ತಮಗೆ ಫೋನ್ ಕರೆ ಮಾಡಿದ ಪ್ರಶಾಂತ ಎನ್ನುವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿರುವ ಪ್ರವೀಣ್, ನೀವು ಈ ರೀತಿ ಫೋನ್ ಮಾಡಿ ಮತ ಕೇಳುತ್ತಿದ್ದೀರಿ. ಚುನಾವಣೆಗೆ ನಿಂತ ಅಭ್ಯರ್ಥಿ ಬಂದು ನಮ್ಮನ್ನು ಭೇಟಿ ಮಾಡಿಲ್ಲ. ಮತಕ್ಕೆ ಬೆಲೆಯೇ ಇಲ್ಲವೇ? ಒಮ್ಮೆಯೂ ನಿಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರ ಗ್ರಾಮಕ್ಕೆ ಭೇಟಿ ನೀಡಿಲ್ಲ. ನಾವೂ ಚುನಾವಣೆಗೆ ನಿಂತು ಆರಿಸಿ ಬಂದಿದ್ದೇವೆ. ನಿಮ್ಮ ಹಾಗೆಯೇ ಎಲ್ಲರಿಗೂ ಫೋನ್ ಮಾಡಿ ಕುಳಿತಲ್ಲೇ ಆರಿಸಿ ಬಂದಿಲ್ಲ. ಮನೆ ಮನೆಗೆ ಹೋಗಿ ಮತ ಯಾಚನೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಆ ಆಡಿಯೋ ವೈರಲ್ ಆಗಿದೆ.
Kshetra Samachara
09/12/2021 08:44 pm