ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಮೀನು ಬಿಟ್ಟು ಜಾಮೀನಿಗಾಗಿ ಅನ್ನದಾತನ ಅಲೆದಾಟ: ಮುಗಿಯದ ಮಹದಾಯಿ ಕೇಸ್...!

ಹುಬ್ಬಳ್ಳಿ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು, ತಮ್ಮಪರ ಹೋರಾಡಿದ ಸಂಘಟನೆಗಳ ಮೇಲಿನ ಪ್ರಕರಣಗಳನ್ನ ತೆಗೆದು ಹಾಕ್ತಾರೆ. ಆದರೆ ಅನ್ನದಾತನ ವಿಷಯದಲ್ಲಿ ಮಾತ್ರ ಆಳುವ ಸರಕಾರಗಳು ಪ್ರಕರಣ ದಾಖಲಿಸುವುದನ್ನು ಬಿಟ್ಟು, ತೆಗೆಯುವ ಕೆಲಸ ಮಾಡ್ತಿಲ್ಲ. ಕಳೆದೊಂದು ದಶಕದಿಂದ ನೀರಿಗಾಗಿ ಹೋರಾಡಿದ ರೈತರ ಮೇಲಿನ ಕೇಸ್ ತೆಗೆದಿರುವುದಾಗಿ ಸರಕಾರ ಹೇಳಿತ್ತು. ಆದ್ರೆ ರೈತರಿಗೆ ಕೋರ್ಟ್ ನಿಂದ ಸಮನ್ಸ್ ಬರುವುದು ಮಾತ್ರ ನಿಂತಿಲ್ಲ. ನ್ಯಾಯಾಲಯಕ್ಕೆ ಅಲೆದು ಅಲೆದು ರೈತರು ಸುಸ್ತಾಗಿದ್ದಾರೆ..

ಹೌದು.. ಉತ್ತರ ಕರ್ನಾಟಕದ ರೈತರ ಹಾಗೂ ಈ ಭಾಗದ ಜನರ ಬಹುದೊಡ್ಡ ಹೋರಾಟ ಅಂದರೆ ಅದು ಮಹದಾಯಿ ಹೋರಾಟ. ಇಂದಿಗೂ ನಿರಂತರವಾಗಿ ನೀರಿಗಾಗಿ ಈ ಭಾಗದ ರೈತರು, ಸಂಘ ಸಂಸ್ಥೆಗಳು ನಿರಂತರವಾಗಿ ಹೋರಾಟ ಮಾಡ್ತಿವಿ.‌ ಹೀಗೆ ನೀರಿಗಾಗಿ ಹೋರಾಟ ಮಾಡ್ತಿರುವ ರೈತರ ಮೇಲೆ ಹಾಕಿರುವ ಕೇಸ್ ಇದುವರೆಗೂ ಹಿಂಪಡೆದಿಲ್ಲ. ಅಧಿಕಾರಕ್ಕೆ ಬಂದ್ರೆ ರೈತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯುವುದಾಗಿ ಅಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ರು. ರೈತರ ಹೋರಾಟಕ್ಕೆ ಬೆಂಬಲ ನೀಡಿದ್ರು. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಮೇಲಿನ‌ ಪ್ರಕರಣ ವಾಪಸ್ ಪಡೆದಿರೋದಾಗಿ ಹೇಳಿದ್ದರು. ಒಂದಿಷ್ಟು ಸಣ್ಣಪುಟ್ಟ ಪ್ರಕರಣ‌ ವಾಪಸ್ ಪಡೆದು ರೈತರ ಮೂಗಿಗೆ‌ ತುಪ್ಪ ಸವರುವ ಕೆಲಸ ಮಾಡಿದ್ರು. ಇದರ ಪರಿಣಾಮವಾಗಿ ಇಂದಿಗು ರೈತರು ಎಲ್ಲಾ ಕೇಲಸ ಬಿಟ್ಟು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದ ನವಲಗುಂದ, ನರಗುಂದ ಹಾಗೂ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ರೈತರು ಸೇರಿದಂತೆ ಜಿಲ್ಲೆಯ ಹೋರಾಟಗಾರರ ಮೇಲೆ ಐವತ್ತಕ್ಕೂ ಅಧಿಕ ಕೇಸ್ ಗಳಿವೆ. ಈ ಹಿಂದೆ ಕೆಲವು ಕೇಸ್ ಗಳನ್ನು ಹಿಂಪಡೆಯಲಾಗಿದೆ. ಆದರೇ ಉಳಿದ ಸುಮಾರು ಐವತ್ತಕ್ಕೂ ಹೆಚ್ಚು ಕೇಸ್ ಗಳನ್ನು ಇದುವರೆಗೂ ಹಿಂಪಡೆದಿಲ್ಲ. ಸಾರ್ವಜನಿಕ ಹೋರಾಟಕ್ಕೆ ಮನೆಯ ಕೆಲಸ ಕಾರ್ಯವನ್ನು ಬಿಟ್ಟು ಹೋರಾಟ ನಡೆಸುವ ಹೋರಾಟಗಾರರು ಈಗ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಅಲ್ಲದೇ ರೈತ ತನ್ನ ಕೃಷಿ ಅವಧಿಯಲ್ಲಿಯೇ ಕೋರ್ಟ್ ಹಾಜರು ಆಗಬೇಕಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

Edited By : Nagesh Gaonkar
Kshetra Samachara

Kshetra Samachara

06/12/2021 05:22 pm

Cinque Terre

93.73 K

Cinque Terre

4

ಸಂಬಂಧಿತ ಸುದ್ದಿ