ಕುಂದಗೋಳ : ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಮಾವೇಶ ಕುಂದಗೋಳ ಪಟ್ಟಣದ ಮರಾಠಾ ಸಭಾ ಭವನದಲ್ಲಿ ಇಂದು ಜರಗಿತು.
ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿಯವರು ಮಾತನಾಡಿ ಇಂದು ದೇಶದಾದ್ಯಂತ ನೂರು ಕೋಟಿಗೂ ಹೆಚ್ಚು ಲಸಿಕೆ ಸಾಧನೆ ಹಿಂದೆ ಆಶಾ ಕಾರ್ಯಕರ್ತೆಯರ ಶ್ರಮವಿದೆ ಆದರೆ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರಕುತ್ತಿಲ್ಲ, ರಾಜ್ಯ ಸರಕಾರ ಅವರಿಗೆ ಮಾಸಿಕ 12 ಸಾವಿರ ವೇತನ ನಿಗದಿ ಮಾಡಬೇಕು ಎಂದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ ಇಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉಳಿದಿರುವ ಏಕೈಕ ಮಾರ್ಗವೆಂದರೆ, ಸಂಘಟನೆಯನ್ನು ಗಟ್ಟಿಮಾಡಿಕೊಂಡು, ವೈಚಾರಿಕವಾಗಿ ಸನ್ನದ್ಧರಾಗಬೇಕು ರಾಜಿ ರಹಿತ ಹೋರಾಟ ಕಟ್ಟಬೇಕು ಆಶಾ ಕಾರ್ಯಕರ್ತೆಯರು ಹೋರಾಟ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಎಲ್ಲ ಆಶಾ ಸಹಾಯಕಿಯರು ಉಪಸ್ಥಿತರಿದ್ದರು.
Kshetra Samachara
22/11/2021 09:24 pm