ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಾವೇಶದಲ್ಲಿ ಸೆಲ್ಪಿ ಹುಚ್ಚು: ಯಾತ್ರೆಯೋ ಪೋಟೋ ಶೂಟ್ ಜಾತ್ರೆಯೋ...?

ಹುಬ್ಬಳ್ಳಿ: ನಮ್ಮ ಜನರಿಗೆ ನಿಜಕ್ಕೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಎಷ್ಟಿದೆ ಅಂದರೆ ಜೀವವನ್ನು ಲೆಕ್ಕಿಸದೇ ಸೆಲ್ಪಿಗಾಗಿ ಹರಸಾಹಸ ಪಡುತ್ತಾರೆ. ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ನೂಕು ನುಗ್ಗಲಿನಲ್ಲಿ ಮುಗಿಬಿದ್ದಿರುವುದು ಕಂಡು ಬಂದಿತು.

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಜನಸ್ವರಾಜ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಕೆಳಗೆ ಬಂದ ಯಡಿಯೂರಪ್ಪ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಆಗಮಿಸಿರುವುದು ಇವರೆಲ್ಲರೂ ಸಮಾವೇಶಕ್ಕೆ ಬಂದಿದ್ದಾರೋ ಅಥವಾ ಸೆಲ್ಪಿಗಾಗಿ ಬಂದಿದ್ದಾರೋ ಎಂಬುವಂತ ಅನುಮಾನ ಕಾಡುವುದಂತೂ ಖಂಡಿತ.

ಇನ್ನೂ ಕಾರ್ಯಕರ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗದೇ ಪರದಾಡುವಂತಾಗಿದೆ. ಬಿಜೆಪಿ ಸಮಾವೇಶ ಜನಸ್ವರಾಜ್ ಯಾತ್ರೆಯಾಗದೇ ಸೆಲ್ಪಿ ಶೂಟ್ ಯಾತ್ರೆಯಾಗಿದ್ದಂತೂ ಸತ್ಯ...

Edited By : Nagesh Gaonkar
Kshetra Samachara

Kshetra Samachara

19/11/2021 04:21 pm

Cinque Terre

99.41 K

Cinque Terre

4

ಸಂಬಂಧಿತ ಸುದ್ದಿ