ಹುಬ್ಬಳ್ಳಿ: ಶಾಸಕರ ನಿಧಿ ಅನುದಾನದ ಅಡಿಯಲ್ಲಿ ಹಾಗೂ ಅಂಗವಿಕಲ ಇಲಾಖೆಯ ಸಹಯೋಗದೊಂದಿಗೆ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹತ್ತು ತ್ರಿಚಕ್ರ ವಾಹನ ವಿತರಣೆ ಮಾಡಿ ಬಳಿಕ ಮಾತನಾಡಿದ ಅವರು, ಅಂಗವಿಕಲ ಇಲಾಖೆಯ ಹಾಗೂ ಶಾಸಕರ ನಿಧಿ ಅನುದಾನದಲ್ಲಿ ಹತ್ತು ಜನ ಅರ್ಹ ಫಲಾನುಭವಿಗಳಿಗೆ ವಾಹನ ವಿತರಣೆ ಮಾಡಿದ್ದು, ಸರಿಯಾಗಿ ಉಪಯೋಗ ಮಾಡುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
Kshetra Samachara
18/09/2021 02:31 pm