ಅಣ್ಣಿಗೇರಿ: ಸ್ಥಳೀಯ ಪುರಸಭೆಗೆ ಸರ್ಕಾರವು 2011ರ ಜನಗಣತಿಯನ್ನಾಧರಿಸಿ ವಾರ್ಡ್‍ಗಳಿಗೆ ಮಿಸಲಾತಿಯನ್ನು ನಿಗದಿಪಡಿಸಿ ಕರಡು ವಾರ್ಡ್‍ವಾರು ಮೀಸಲಾತಿಯ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.
ಈ ಅಧಿಸೂಚನೆ ಕುರಿತು 07 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಸೆಪ್ಟೆಂಬರ್ 13, 2021 ರೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಧಾರವಾಡ ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಕರಡು ವಾರ್ಡ್‍ವಾರು ಮೀಸಲಾತಿಯ ವಿವರ: ವಾರ್ಡ್ 1-ಸಾಮಾನ್ಯ, ವಾರ್ಡ್ 2-ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 3- ಹಿಂದುಳಿದ ವರ್ಗ ‘ಬಿ’ (ಮಹಿಳೆ), ವಾರ್ಡ್ 4-ಸಾಮಾನ್ಯ, ವಾರ್ಡ್ 5- ಹಿಂದುಳಿದ ವರ್ಗ ‘ಎ’, ವಾರ್ಡ್ 6 - ಸಾಮಾನ್ಯ (ಮಹಿಳೆ), ವಾರ್ಡ್ 7-ಹಿಂದುಳಿದ ವರ್ಗ ಬಿ, ವಾರ್ಡ್ 8- ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 9- ಸಾಮಾನ್ಯ, ವಾರ್ಡ್ 10 -ಸಾಮಾನ್ಯ (ಮಹಿಳೆ), ವಾರ್ಡ್ 11- ಹಿಂದುಳಿದ ವರ್ಗ ‘ಎ’, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ 13- ಹಿಂದುಳಿದ ವರ್ಗ ‘ಎ’ (ಮಹಿಳೆ), ವಾರ್ಡ್ 14-ಸಾಮಾನ್ಯ, ವಾರ್ಡ್ 15-ಸಾಮಾನ್ಯ, ವಾರ್ಡ್ 16-ಪರಿಶಿಷ್ಟ ಪಂಗಡ, ವಾರ್ಡ್ 17- ಹಿಂದುಳಿದ ವರ್ಗ ‘ಎ’, ವಾರ್ಡ್ 18 -ಸಾಮಾನ್ಯ, ವಾರ್ಡ್ 19- ಪರಿಶಿಷ್ಟ ಜಾತಿ, ವಾರ್ಡ್ 20-ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 21- ಸಾಮಾನ್ಯ (ಮಹಿಳೆ), ವಾರ್ಡ್ 22- ಸಾಮಾನ್ಯ (ಮಹಿಳೆ), ವಾರ್ಡ್ 23- ಸಾಮಾನ್ಯ (ಮಹಿಳೆ).
Kshetra Samachara
08/09/2021 01:41 pm