ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ವಾರ್ಡ್ ಮಾಡಿದ ಜನ ನಾಯಕನಿಗೆ ಜೈ ಎಂದ ವಾರ್ಡ್ ಜನತೆ

ಹುಬ್ಬಳ್ಳಿ: ಅದು ಮೊದಲೇ ಅಭಿವೃದ್ಧಿ ಕಂಡ ವಾರ್ಡ್. ತನ್ನ ವಾರ್ಡಿಗೆ ಏನಾದರೊಂದು ಹೊಸದನ್ನು ಮಾಡಲೇಬೇಕೆಂಬ ತುಡಿತ. ಅಧಿಕಾರ ಸಿಕ್ಕರೆ ವಾರ್ಡಿನ ಚಿತ್ರಣವನ್ನೇ ಬದಲಿಸಿ ಜನರ ಸೇವೆ ಮಾಡಬೇಕೆಂಬ ಮಹಾದಾಸೆ ಹೊಂದಿ ' ಕೈ ' ಹಿಡಿದು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದಾರೆ ಕೌಸರ್ ಬಾನು ಬಿ. ಗುಡಮಾಲ್.

ಇಡೀ ತಮ್ಮ ವಾರ್ಡ್ ನ್ನು ಈಗಾಗಲೇ ಸ್ಮಾರ್ಟ್ ವಾರ್ಡ್ ಮಾಡಿದ, ದೀ ಗ್ರೇಟ್ ವರ್ಕರ್ ಎಂದು ಎನಿಸಿಕೊಂಡ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಸೀರ್ ಅಹಮದ್ ಗುಡಮಾಲ್. ಅವರು ಈಗ ವಾರ್ಡ್ 60 ರಲ್ಲಿ ಇನ್ನಷ್ಟು ಸೇವೆ ಮಾಡಬೇಕೆಂದು ತಮ್ಮ ಪತ್ನಿಯನ್ನು ಅಲ್ಲಿನ ಜನಾನೇ ಅಖಾಡಕ್ಕೆ ಇಳಿಸಿದ್ದಾರೆ.

ಈ ಹಿಂದೆ ಬಶೀರ್ ಅಹ್ಮದ್ ಗುಡಮಾಲ್ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ದೊಡ್ಡದೊಂದೆ ಲಿಸ್ಟೇ ಇದೆ. ಹೀಗಾಗಿ ಪ್ರಸಕ್ತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೌಸರ್ ಗುಡಮಾಲ್ ಅವರ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗುತ್ತಿದೆ.

ಕೌಸರಬಾನು ಗುಡಮಾಲ್ ಅವರ ಪತಿ, ಬಶೀರ ಅಹ್ಮದ್ ಗುಡಮಾಲ್ ಪಾಲಿಕೆ ಸದಸ್ಯರಾಗಿ ತಮ್ಮ ವಾರ್ಡ್ ನಲ್ಲಿ ಒಳ ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣ,‌ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ನಾಲಾ ತಡೆಗೋಡೆ ಹಾಗೂ ಶೌಚಾಲಯ ನಿರ್ಮಾಣ ಮಾಡುವುದರೊಂದಿಗೆ ಕುಡಿಯುವ ನೀರಿಗಾಗಿ 16 ಬೋರ್ ವೆಲ್ ಕೊರೆಸಿದ್ದಾರೆ. ಶಾಲೆಗಳಲ್ಲಿ ಪೇವರ್ಸ್ ಅಳವಡಿಸಿದ್ದಾರೆ.

ಇನ್ನು ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸರ್ವ ಧರ್ಮ ಸಮನ್ವಯ ಸಮಿತಿ ಟ್ರಸ್ಟ್ ಮೂಲಕ ಜಾತಿ, ಧರ್ಮ ನೋಡದೇ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದ್ದಾರೆ. ಶವ ರವಾನೆಗಾಗಿ ಆಂಬ್ಯೂಲೆನ್ಸ್ ಕೂಡಾ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ದುಡಿದ ಹಣದಲ್ಲಿಯೇ ಲಾಕ್ ಡೌನ್ ಸಂಕಷ್ಟಕ್ಕೆ ಒಳಗಾದ ಜನರಿಗೆ ಫುಡ್ ಕಿಟ್ ವಿತರಿಸಿದ್ದಾರೆ. ಈ ಹಿಂದೆ ನೆರೆ ಬಂದಾಗಲೂ ಮುಂದೆ ನಿಂತು ಜನರಿಗೆ ಸಹಾಯ ಮಾಡಿದ್ದಾರೆ. ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ಪತ್ನಿ ಕೌಸರಬಾನು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿಯೇ ಗುಡಮಾಲ್ ಅವರ ಸ್ನೇಹಿತರು ಹಾಗೂ ವಾರ್ಡಿನ ಪ್ರಮುಖರು ಈ ಬಾರಿಯೂ ಗುಡಮಾಲ್ ಕುಟುಂಬ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿ ನಿಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

26/08/2021 05:23 pm

Cinque Terre

125.27 K

Cinque Terre

16

ಸಂಬಂಧಿತ ಸುದ್ದಿ