ಧಾರವಾಡ: ಡಾ.ಮಯೂರ ಮೋರೆ.. ಮೋರೆ ಕುಟುಂಬದ ಉತ್ಸಾಹಿ ಯುವ ನಾಯಕ. ವಿದೇಶದಲ್ಲಿ ಎಂಬಿಬಿಎಸ್ ಕುರಿತು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಇದೀಗ ತವರು ಜಿಲ್ಲೆಯ ಅದರಲ್ಲೂ ತಮ್ಮ 24ನೇ ವಾರ್ಡಿನಲ್ಲಿ ಜನ ಸೇವೆ ಮಾಡಲು ಕಂಕಣ ಬದ್ಧರಾಗಿ ನಿಂತಿದ್ದಾರೆ.
ಧಾರವಾಡದ ವಾರ್ಡ್ ನಂಬರ್ 24ರ ವ್ಯಾಪ್ತಿಗೆ ಬರುವ ನವಲೂರು ಮೋರೆ ಅವರ ಸ್ವಂತ ಊರು. ಡಾ.ಮಯೂರ ಮೋರೆ ಅವರ ತಂದೆ ಹಾಗೂ ಅವರ ಅಜ್ಜ ಕೂಡ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಹೆಸರುವಾಸಿಯಾದವರು. 2014ರಲ್ಲಿ ವೈದ್ಯರಾದ ಮಯೂರ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಲಂಡನ್‌ಗೆ ತೆರಳಿದ್ದರು. ಅಲ್ಲಿಂದ ಮರಳಿ ಬಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ತಮ್ಮ ಸ್ವಂತ ಊರಿನ ಸ್ಥಿತಿ ಕಂಡು ರಾಜಕೀಯ ಪ್ರವೇಶ ಮಾಡಿದ್ದಾರೆ. ಇವರ ಅಜ್ಜ ಹಾಗೂ ತಂದೆಯವರು ಕೂಡ ನವಲೂರು ಗ್ರಾಮದ ಶಾಲೆ, ದೇವಸ್ಥಾನ, ಮಸೀದಿಗಳಿಗೆ ಆರ್ಥಿಕ ನೆರವು ನೀಡಿ ಆ ವಾರ್ಡಿನ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ಅಲ್ಲದೇ ಪ್ರತಿವರ್ಷ ಸಾಮೂಹಿಕ ವಿವಾಹಕ್ಕೆ ತಮ್ಮದೇ ಆದ ದೇಣಿಗೆ ನೀಡುವ ಮೋರೆ ಕುಟುಂಬ ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದೆ.
ಇದೀಗ ಮೋರೆ ಕುಟುಂಬದ ಕುಡಿ ಡಾ.ಮಯೂರ ಅವರು ವಿದ್ಯಾವಂತರು. ಅಲ್ಲದೇ ಸಾಕಷ್ಟು ಓದಿಕೊಂಡಿರುವ ಹಾಗೂ ಹೆಚ್ಚು ತಿಳುವಳಿಕೆ ಹೊಂದಿರುವ ಯುವ ನಾಯಕ. ತಮ್ಮದೇ ಆದ ಸಾಕಷ್ಟು ಉದ್ಯಮ, ವೃತ್ತಿ ಇದ್ದರೂ ಕೂಡ ತಮ್ಮ ವಾರ್ಡಿನ ಜನರ ಆರೋಗ್ಯ ಪರಿಸ್ಥಿತಿ ಹಿತದೃಷ್ಟಿಯಿಂದ ಏನಾದರೊಂದು ಬದಲಾವಣೆ ತರಲೇಬೇಕು ಎಂದು ಇದೀಗ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ವಾಸ್ತವವಾಗಿ ಈ ವಾರ್ಡಿನಲ್ಲಿ ಮೋರೆ ಅವರ ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ. ತಮ್ಮ ಕನಸಿನ ವಾರ್ಡ್ ಹೇಗಿರಬೇಕು ಎಂಬುದರ ಕುರಿತು ಸ್ವತಃ ಡಾ.ಮಯೂರ ಮೋರೆ ಅವರೇ ಹೇಳುತ್ತಾರೆ ಕೇಳಿ.
ಗೋಕಾಕ್ ಸಾಹುಕಾರ ಎಂದೇ ಹೆಸರುವಾಸಿಯಾಗಿರುವ ಜಾರಕಿಹೊಳಿ ಕುಟುಂಬ ಅದರಲ್ಲೂ ಸತೀಶ್ ಜಾರಕಿಹೊಳಿ ಅವರೊಂದಿಗೆ ಈ ಮೋರೆ ಕುಟುಂಬ ಉತ್ತಮ ಒಡನಾಟ ಹೊಂದಿದೆ. ಡಾ.ಮಯೂರ ಅವರ ತಂದೆ ಮನೋಹರ ಅವರು ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದರೂ ಕೂಡ ಎಲೆಮರೆಯ ಕಾಯಿಯಂತೆ ಉಳಿದುಕೊಂಡು ಪ್ರಚಾರದಿಂದ ದೂರ ಉಳಿದಿದ್ದಾರೆ. ಆದರೆ, ಜನ ಮಾತ್ರ ಇವರ ಸೇವೆಯನ್ನು ಮರೆತಿಲ್ಲ. ಹೀಗಾಗಿಯೇ ವಾರ್ಡ್ ನಂಬರ್ 24 ರ ಜನ ಇವರನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ.
ವೈದ್ಯೋ ನಾರಾಯಣೋ ಹರೀಃ ಎಂಬ ಮಾತಿದೆ. ಇಲ್ಲಿ ವೈದ್ಯರನ್ನು ನಾವು ದೇವರಿಗೆ ಹೋಲಿಕೆ ಮಾಡುತ್ತೇವೆ. ಅದೇ ರೀತಿ ವೈದ್ಯ ವೃತ್ತಿಯ ಜೊತೆಗೆ ಡಾ.ಮಯೂರ ಅವರು ತಮ್ಮ ಇಡೀ ವಾರ್ಡಿನ ಜನತೆ ಆರೋಗ್ಯವಂತರಾಗಿ ಇರಬೇಕು ಎಂಬ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಜೊತೆಗೆ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಅವರು ಕಂಕಣಬದ್ಧರಾಗಿ ನಿಂತಿದ್ದಾರೆ. ಇಂತಹ ಯುವ ಉತ್ಸಾಹಿ ನಾಯಕನಿಗೆ ಗೆಲುವು ಸಿಗಲಿ. ಅವರ ಮೂಲಕ ಇಡೀ ವಾರ್ಡು ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದೇ ನಮ್ಮ ಹಾರೈಕೆ.
Kshetra Samachara
25/08/2021 04:49 pm