ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಇಂಡಸ್ಟ್ರಿಯಲ್ ಕಾರಿಡಾರಗಾಗಿ ಭೂಸ್ವಾಧಿನ: ರೈತರಿಗೆ ಉದ್ಯೋಗ ಭದ್ರತೆ ನೀಡಲಿ ಮಾಜಿ ಸಚಿವ ಸಂತೋಷ ಲಾಡ್

ಕಲಘಟಗಿ: ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧಿನಕ್ಕೆ ಮುಂದಾಗಿರುವ ರಾಜ್ಯ ಸರಕಾರ ಮೊದಲು ರೈತರ ಕುಟುಂಬಗಳಿಗೆ ಉದ್ಯೋಗ ಭಧ್ರತೆ ನೀಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಆಗ್ರಹಿಸಿದರು.

ಮಡ್ಕಿಹೊನ್ನಳ್ಳಿಯ ಅಮೃತ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕೆ ಐ ಎ ಡಿ ಬಿ ಎಯ ಮೂಲಕ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣದ ಉದ್ದೇಶದಿಂದ ಅಳ್ನಾವರದಲ್ಲಿ ಸುಮಾರು ೨೫೦೦ ಎಕರೆ ಭೂಸ್ವಾಧಿನ ಮಾಡಲಾಗುತ್ತಿದೆ.ಇದಕ್ಕೆಅಭ್ಯಂತರವೇನು ಇಲ್ಲ.ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ ೩ ಸಾವಿರ ಎಕರೆ ಭೂಮಿ ಆಗಲೇ ಲಭ್ಯವಿದೆ. ಸುಮಾರು ೨೫೦೦ ಕೋಟಿ ರೂ ನೀಡಿ ಭೂಮಿ ಖರೀದಿ ಮಾಡಲಾಗುತ್ತಿದೆ.

ಸರಕಾರಕ್ಕೆ ಆಕ್ಸಿಜನ್,ಔಷದಿ ಖರೀದಿಗೆ,ಶಿಕ್ಷಕರ ವೇತನಕ್ಕೆ ಸರಕಾರದ ಬಳಿ ಹಣ ಇಲ್ಲ,ಭೂಮಿ ಖರೀದಿಗೆ ಸರಕಾರದ ಬಳಿ ಎಲ್ಲಿಂದ ಹಣ ಬರುತ್ತದೆ ಎಂದು ಲಾಡ್ ಪ್ರಶ್ನಿಸಿದರು.ಭೂಮಿ ಕಳೆದುಕೊಳ್ಳುವ ರೈತರಿಗೆ ಉದ್ಯೋಗ ಭದ್ರತೆ ಒದಗಿಸಲು ಸರಕಾರ ಕಾನೂನು ಪ್ರಕಾರ ಲ್ಯಾಂಡ್ ಅವಾರ್ಡ ಹಾಗೂ ಪರಿಹಾರ ನೀಡಲಿ ಎಂದರು.

Edited By : Nagesh Gaonkar
Kshetra Samachara

Kshetra Samachara

11/08/2021 09:33 pm

Cinque Terre

110.9 K

Cinque Terre

8

ಸಂಬಂಧಿತ ಸುದ್ದಿ