ಕಲಘಟಗಿ: ಜಲಜೀವನ ಹಾಗೂ ಜಲಧಾರೆ ಮಿಷನ್ ಮೂಲಕ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ರೈತರ ಮನೆಗೆ ಮಲಪ್ರಭ ನದಿಯು ಶುದ್ಧ ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಹದಿನೇಳನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೈಮಗ್ಗ,ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ತಿಳಿಸಿದರು.
ಕಲಘಟಗಿ ಪಟ್ಟಣದಲ್ಲಿ ಶಾಸಕ ಸಿ ಎಂ ನಿಂಬಣ್ಣವರ ನಿವಾಸಕ್ಕೆ ತೆರಳಿ ಸೌಜನ್ಯದ ಭೇಟಿಯ ನಂತರ ಮಾತನಾಡಿದ ಅವರು,ಧಾರವಾಡ ಗ್ರಾಮಾಂತರ ಜಿಲ್ಲೆಗೆ ಮಲಪ್ರಭಾ ನದಿ ನೀರು ಒದಗಿಸುವ ಸವಾಲು ಇದ್ದು,ಟೆಂಡರ್ ಕರೆಯಲಾಗಿದೆ ಎಂದರು.ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಹಿರಿಯರಾದ ಶಾಸಕ ಸಿ ಎಂ ನಿಂಬಣ್ಣವರ ಸೌಜನ್ಯದ ಭೇಟಿಗೆ ಬಂದಿರುವುದಾಗಿ ತಿಳಿಸಿದರು.
ಶಾಸಕ ಸಿ ಎಂ ನಿಂಬಣ್ಣವರ ಹಾಗೂ ಪ ಪಂ ಸದಸ್ಯರು,ಬಿಜೆಪಿ ಮುಖಂಡರು,ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
08/08/2021 08:59 pm