ಧಾರವಾಡ : ಸುವರ್ಣ ಕರ್ನಾಟಕ ಕಾರಿಡಾರ್ (ಬಿಎಂಐಸಿ) ಹೆಸರಿನಲ್ಲಿ ಕೆಐಎಡಿಬಿಯಿಂದ ಪ್ರಾರಂಭಿಸಿರುವ ಧಾರವಾಡ ತಾಲೂಕಿನ 14 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಹಾಗೂ ರೈತ ಕೃಷಿ ಕಾರ್ಮಿಕರ ಸಂಘಟನೆ-ಎಐಕೆಕೆಎಂಎಸ್ ನಿಂದ ಜಂಟಿಯಾಗಿ ನಗರದ ಕೆಐಎಡಿಬಿ ಕಛೇರಿ ಎದುರು ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ರೈತರು ಪ್ರಾಣಬೇಕಾದರೂ ಕೊಟ್ಟೇವು ಇಂಚು ಭೂಮಿ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆರ್.ಕೆ.ಎಸ್ ನ ಜಿಲ್ಲಾದ್ಯಕ್ಷರಾದ ಲಕ್ಷ್ಮಣ ಜಡಗನ್ನವರ ಮಾತನಾಡಿ, ಇತ್ತೀಚಿಗೆ ರಾಷ್ಟೀಯ ಹೆದ್ದಾರಿ 4 ಗೆ ಹೊಂದಿಕೊಂಡಂತೆ ಧಾರವಾಡ ತಾಲೂಕಿನ 11 ಗ್ರಾಮದ ರೈತರ ಭೂಮಿಯನ್ನು ‘ಸುವರ್ಣ ಕರ್ನಾಟಕ ಕಾರಿಡಾರ್(ಬಿಎಂಇಸಿ) ಸಲುವಾಗಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಅಂಗವಾಗಿ ರೈತರಿಗೆ ನೋಟಿಸು ಜಾರಿ ಮಾಡಿರುವುದರ ವಿರುದ್ದ ಹೋರಾಟ ನಡೆದಿದೆ.
ರೈತ ಕೃಷಿಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಬಸವನಗೌಡ ಪಾಟೀಲ್,ಶಂಭುಗೌಡ ಪಾಟೀಲ್, ಉದಯಕುಮಾರ್ ಪಾಟೀಲ್, ಎಫ್. ಜಿ ಹವಲ್ದಾರ್, ಕಲ್ಲಪ್ಪ ಗಾಯಕ್ವಾಡ್, ರಮೇಶ ಹೊಸಮನಿ, ಶಿವಾಜಿ ಸಾವಂತ, ಈಶ್ವರ, ಗೋವಿಂದ ಕೃಷ್ಣಪ್ಪನವರ ಸೇರಿದಂತೆ 14 ಗ್ರಾಮಗಳ ಭೂಮಿ ಉಳಿಸಿ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Kshetra Samachara
04/08/2021 06:17 pm