ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನಿಂದ ಟೋಲ್ ಬಾಯ್ಕಾಟ್ ಅಭಿಯಾನ

ಧಾರವಾಡ: ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆ ಅಗಲೀಕರಣವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಟೋಲ್ ಬಾಯ್ಕಾಟ್ ಎಂಬ ಅಭಿಯಾನಕ್ಕೆ ಮುಂದಾಗಿದೆ.

ಹೌದು! ನರೇಂದ್ರ ಬೈಪಾಸ್ ನಿಂದ ಗಬ್ಬೂರು ಕ್ರಾಸ್ ವರೆಗೆ ರಸ್ತೆ ಅಗಲೀಕರಣವಾಗದೇ ಇದ್ದರೂ ಪ್ರಯಾಣಿಕರಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. 30 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಟ್ಟು 6 ಟೋಲ್ ಗಳಿದ್ದು, ಆ ಮೂಲಕ ಪ್ರಯಾಣಿಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ.

ಈ ರಸ್ತೆಗೆ ಸರ್ವಿಸ್ ರೋಡ್ ಇಲ್ಲದ ಕಾರಣ ಟೋಲ್ ಕಟ್ಟಬಾರದು. ರಸ್ತೆ ಅಗಲೀಕರಣವಾಗದೇ ಇದ್ದರೂ ಜನರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣದ ಮೂಲಕ ಟೋಲ್ ಬಾಯ್ಕೌಟ್ ಎಂಬ ಅಭಿಯಾನಕ್ಕೆ ಮುಂದಾಗಿದೆ.

Edited By : Manjunath H D
Kshetra Samachara

Kshetra Samachara

19/02/2021 02:12 pm

Cinque Terre

23.66 K

Cinque Terre

7

ಸಂಬಂಧಿತ ಸುದ್ದಿ