ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಡಿಸಿ ಕಚೇರಿ ಎದುರು ಅಡುಗೆ ಮಾಡಿ ಮಹಿಳಾ 'ಕೈ' ಕಾರ್ಯಕರ್ತರು ಪ್ರತಿಭಟನೆ

ಧಾರವಾಡ: ಅಡುಗೆ ಅನಿಲ ದರ ಏರಿಕೆ ಖಂಡಿಸಿ ಹು-ಧಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಮಹಿಳಾ ಕಾರ್ಯಕರ್ತರು ಅಡುಗೆ ಮಾಡಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುವುದರ ಮುಂಚೆ ದರ ಏರಿಕೆ ಮಧ್ಯೆಯೇ ಗಾಯದ ಮೇಲೆ ಬರೆ ಎಂಬಂತೆ ಅಡುಗೆ ಅನಿಲ ದರವು 50 ರೂ. ಹೆಚ್ಚಳವಾಗಿದೆ. ಹೀಗಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಸ್ಥಿತಿ ದಯನೀಯವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಒಂದು ಸಿಲಿಂಡರ್ ಬೆಲೆ ಕೇವಲ 410 ರೂ. ಇತ್ತು. ಆದರೆ ಪ್ರಸ್ತುತ ಅದೇ ಸಿಲಿಂಡರ್ ಬೆಲೆ ರೂ. 772 ಕ್ಕೆ ಏರಿಕೆಯಾಗಿದೆ. ಪರಿಣಾಮ ಶ್ರೀ ಸಾಮಾನ್ಯನ ಬದುಕು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

17/02/2021 01:56 pm

Cinque Terre

25.34 K

Cinque Terre

1

ಸಂಬಂಧಿತ ಸುದ್ದಿ