ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಹಶೀಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

ಕುಂದಗೋಳ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲ ಅವರ ಜಯಂತಿಯನ್ನು ತಹಶೀಲ್ದಾರ ಬಸವರಾಜ ಮೆಳವಂಕಿ ಅವರ ನೇತೃತ್ವದಲ್ಲಿ ಸೇವಾಲಾಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ತಹಶೀಲ್ದಾರ ಬಸವರಾಜ ಮೆಳವಂಕಿ ಮಾತನಾಡಿ ಸಂತ ಸೇವಾಲಾಲ ಅವರ ತತ್ವಾದರ್ಶಗಳು ಎಂದಿಗೂ ಜನರಿಗೆ ಪ್ರೇರಕ ಬಂಜಾರ ಸಮುದಾಯದ ಏಳ್ಗೆಗಾಗಿ ಅವರು ಕೈಗೊಂಡ ಕಾರ್ಯಗಳು ಇಂದಿಗೂ ನಾವೇಲ್ಲರೂ ಸ್ಮರಿಸಬೇಕೆಂದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತ ಸಿಬ್ಬಂದಿಗಳು ಹಾಗೂ ಬಂಜಾರ ಸಮುದಾಯದ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

15/02/2021 05:03 pm

Cinque Terre

13.28 K

Cinque Terre

0

ಸಂಬಂಧಿತ ಸುದ್ದಿ