ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ಆಗುವ ವಿಷಯದಲ್ಲಿ ಗೊಂದಲವಾಗುತ್ತಲೇ ಬಂದಿದ್ದು, ಈಗ ಕೆಎಲ್ಇ ಸಂಸ್ಥೆಯ ಹೆಸರನ್ನ ಮುಂದೆಲೇಯಾಗಿ ತೆಗೆದುಕೊಂಡು ಹೆಸರು ಕೆಡಿಸಲಾಗುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಭಾಕರ ಕೋರೆಯವರು, ಗದಗ ತೊಂಟದಾರ್ಯ ಸ್ವಾಮಿಗಳ ಬಳಿ ಹೋದಾಗ, ಅವರು ಮೂರುಸಾವಿರ ಮಠದವರಿಗೆ ತಿಳಿಸಿ, ಅಲ್ಲಿ ವೈದ್ಯಕೀಯ ಕಾಲೇಜ್ ಮಾಡೋಕೆ ಮುಂದಾಗ್ಲಿ ಎಂದ್ರು. ಹಾಗಾಗಿಯೇ ನಾವೂ ಮೂರುಸಾವಿರ ಮಠದ ಹಿರಿಯ ಸ್ವಾಮೀಜಿಗಳನ್ನ ಭೇಟಿಯಾಗಿದ್ವಿ. ಆಗ ಮೊದಲಿನ ಸ್ವಾಮೀಜಿಯವರು, ‘ಒಂದು ವ್ಯಾಜ್ಯವಿದ್ದ ಭೂಮಿಯಿದೆ. ಅದನ್ನ ಸರಿ ಮಾಡಿಸಿಕೊಂಡು ನೀವೇ ಕಾಲೇಜು ಮಾಡಿಕೊಳ್ಳಿ’ ಅಂದ್ರು. ಹಾಗಾಗಿಯೇ ನಾವೂ ಆಸ್ಪತ್ರೆ ಮಾಡಲು ಹೊರಟಿದ್ದು ಎಂದರು.
ಕೆಎಲ್ಇ ಸಂಸ್ಥೆಗೆ ಜಾಗ ಕೊಟ್ಟು ಹದಿನೇಳು ವರ್ಷದ ಹಿಂದೆ ಮಾಡಿದ್ದು, ಇಷ್ಟು ದಿನ ಈ ಸ್ವಾಮಿಗಳು ಎಲ್ಲಿದ್ದೀರಿ. ಕೆಎಲ್ಇ ಸಂಸ್ಥೆಗೆ ಜಾಗವನ್ನ ಕೊಟ್ಟಿರುವುದು ವಯಕ್ತಿಕವಾಗಿ ಅಲ್ಲಾ. ಕೆಎಲ್ಇ ಸಂಸ್ಥೆ ಕೂಡಾ ಸಮಾಜದ ಆಸ್ತಿ ಎಂದು ಹೇಳಿದರು. ದಾನ ಕೊಟ್ಟ ಜಾಗವನ್ನ ಯಾವುದೇ ಕಾರಣಕ್ಕೂ ಮರಳಿ ಕೊಡುವುದಿಲ್ಲ. ಒಂದೂವರೆ ವರ್ಷದ ನಂತರ ಆಸ್ಪತ್ರೆ ನಿರ್ಮಾಣವಾಗುತ್ತೆ. ಗೊತ್ತಿಲ್ಲ ಎಂದರು...`
Kshetra Samachara
10/02/2021 05:17 pm