ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಾಲಿಮೂಡ್ ನಲ್ಲಿ ಗ್ರಾಮೀಣ ಆಟ‌ ಆಡಿ ಎಂಜಾಯ್ ಮಾಡಿದ ಶಾಸಕ ಅರವಿಂದ ಬೆಲ್ಲದ....

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಮತ್ತು ಭಾರತೀಯ ಜನತಾ ಪಕ್ಷದ ಸ್ಥಳೀಯ ಪ್ರಮುಖರು ಫುಲ್ ಜಾಲಿ ಮೂಡಲಿದ್ದಾರೆ.

ನಗರದ ಹೊರವಲಯದ ಇಟಿಗಟ್ಟಿ ಬಳಿಯ ಫಾರ್ಮ್ ಹೌಸನಲ್ಲಿ ದೇಶಿ ಆಟಗಳನ್ನಾಡುತ್ತ ಸಮಯ ಕಳೆಯುತ್ತಿದ್ದಾರೆ.

ಭಾರತೀಯ ಜನತಾ ಪಕ್ಷದ ಸೆಂಟ್ರಲ್ ಕ್ಷೇತ್ರದ ಮಾಜಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ, ಶಂಕರ ಶೇಳಕೆ ಸೇರಿದಂತೆ ಹಲವರು ದೇಸಿ ಕ್ರೀಡೆಯಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದರು.

ಮಹಾಭಾರತದಲ್ಲಿ ಬರುವ ಪ್ರಮುಖರ ಹೆಸರುಗಳನ್ನು ಹೇಳುವಾಟದಲ್ಲಿ ಎದುರಾಳಿ ಗುಂಪೊಂದು ರಾಮಾಯಣದ ಸೀತೆ ಹೆಸರು ಹೇಳಿ, ನಗೆಬುಗ್ಗೆಯಾದ ಘಟನೆಯೂ ನಡೆಯಿತು. ನಿತ್ಯ ರಾಜಕೀಯ ಜಂಜಾಟಗಳನ್ನು‌ ಬದಿಗಿಟ್ಟು ಆಟವಾಡಿ ನಾಯಕರು ಕಾಲ ಕಳೆದರು.

Edited By : Manjunath H D
Kshetra Samachara

Kshetra Samachara

09/02/2021 02:36 pm

Cinque Terre

52.65 K

Cinque Terre

4

ಸಂಬಂಧಿತ ಸುದ್ದಿ